ಕರ್ನಾಟಕ

karnataka

ವಿವಾಹವಾಗಲು ದೇವಸ್ಥಾನಕ್ಕೆ ಹೋಗಿದ್ದ ದಲಿತ ವರನಿಗೆ ಒಳಬಿಡದೆ ಅವಮಾನ

ನವ ಜೀವನಕ್ಕೆ ಕಾಲಿಡಲು ದೇವಸ್ಥಾನಕ್ಕೆ ಬಂದಿದ್ದ ವರನನ್ನು ಒಳಗೆ ಬಿಡದೆ ಅವಮಾನಿಸಿದ ಘಟನೆ ಮಧ್ಯಪ್ರದೇಶದ ಬಿರೋಡಾ ಗ್ರಾಮದಲ್ಲಿ ನಡೆದಿದೆ.

By

Published : Nov 22, 2019, 11:14 AM IST

Published : Nov 22, 2019, 11:14 AM IST

ವಿವಾಹವಾಗಲು ದೇವಸ್ಥಾನಕ್ಕೆ ಹೋಗಿದ್ದ ದಲಿತ ವರನಿಗೆ ಒಳಬಿಡದೆ ಅವಮಾನ

ಬರ್ಹಾನ್​​ಪುರ್​ (ಮಧ್ಯಪ್ರದೇಶ): ಜಾತಿ ವ್ಯವಸ್ಥೆಯ ಬೇರು ಪ್ರಸ್ತುತ ಸಮಾಜದಲ್ಲಿ ಇನ್ನೂ ಆಳಕ್ಕಿಳಿಯುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಂತಿದೆ. ಇಲ್ಲಿನ ಬಿರೋಡಾ ಗ್ರಾಮದಲ್ಲಿ ದೇವಸ್ಥಾನದ ಒಳ ಪ್ರವೇಶಿಸಲು ಮುಂದಾದ ದಲಿತ ವರನೊಬ್ಬನನ್ನು ಕೆಲವು ದುಷ್ಕರ್ಮಿಗಳು ತಡೆದು 'ನೀವು ಕೆಳಜಾತಿಯವರು ಒಳಹೋಗಬಾರದು' ಎಂದು ಹೇಳಿ ಹೊರಕಳುಹಿಸಿ ಅವಮಾನಿಸಿದ್ದಾರೆ.

ವರ ಸಂದೀಪ್​ ಗವಾಲೆ ಮಾತನಾಡಿ, ದೇವಾಲಯದಲ್ಲಿ ವಿವಾಹವಾಗಲು ಜಿಲ್ಲಾಧಿಕಾರಿ ಅನುಮತಿ ಪಡೆದುಕೊಂಡಿದ್ದೆವು. ಅದಕ್ಕಾಗಿ ಕುಟುಂಬಸಮೇತ ಇಲ್ಲಿಗೆ ಬಂದಿದ್ದೇವೆ. ಆದರೆ, ಮದುವೆ ನಡೆಯಬೇಕಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ದೇವಾಲಯದ ಗೇಟ್‌ಗಳನ್ನು ಮುಚ್ಚಿ ಬೀಗ ಹಾಕಿದರು. ಕೆಳಜಾತಿಯವರು ದೇವಸ್ಥಾನದ ಒಳಗೆ ಹೋಗಬಾರದು. ಮುಟ್ಟಾಗುತ್ತದೆ ಎಂದು ಅಡ್ಡಿಪಡಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ದೇವಸ್ಥಾನಕ್ಕೆ ಹೋಗಿದ್ದ ದಲಿತ ವರನಿಗೆ ಒಳಬಿಡದ ದುಷ್ಕರ್ಮಿಗಳು

ದೇವಸ್ಥಾನದಲ್ಲಿ ಮದುವೆಯಾಗಲು ನಿಮ್ಮಿಂದ ಅನುಮತಿ ಪಡೆದರೂ ನಮ್ಮ ಕುಟುಂಬವನ್ನು ಒಳಗೆ ಬಿಡಲಿಲ್ಲ ಎಂದು ಸಂದೀಪ್​ ಗವಾಲೆ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಾಶಿರಾಮ್ ಬಡೋಲೆ ಅವರು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡುವುದಾಗಿ ತಿಳಿಸಿದ್ದಾರೆ.

ದಲಿತ ಕುಟುಂಬಕ್ಕೆ ಯಾವುದೇ ರೀತಿ ತೊಂದರೆ ಆಗದಂತೆ ಭದ್ರತೆ ಒದಗಿಸುತ್ತೇವೆ ಎಂದು ಪೊಲೀಸ್​ ಅಧಿಕಾರಿ ಬಿಕ್ರಮ್​ ಸಿಂಗ್​ ಬೊಮಾನಿಯಾ ಭರವಸೆ ನೀಡಿದರು.

ABOUT THE AUTHOR

...view details