ಕರ್ನಾಟಕ

karnataka

ETV Bharat / bharat

2.9 ಕೋಟಿ ಭಾರತೀಯ ಉದ್ಯೋಗಾಕಾಂಕ್ಷಿ ವೈಯಕ್ತಿಕ ಡೇಟಾ ಲೀಕ್​

ಸೈಬರ್ ಅಪರಾಧಿಗಳು 2.9 ಕೋಟಿ ಉದ್ಯೋಗಾಕಾಂಕ್ಷಿ ಭಾರತೀಯರ ವೈಯಕ್ತಿಕ ಡೇಟಾವನ್ನು ಡಾರ್ಕ್ ನೆಟ್​​ನ ಹ್ಯಾಕಿಂಗ್ ಫೋರಂನಲ್ಲಿ ಉಚಿತವಾಗಿ ಪೋಸ್ಟ್ ಮಾಡಿದ್ದಾರೆ ಎಂದು ಆನ್‌ಲೈನ್ ಗುಪ್ತಚರ ಸಂಸ್ಥೆ ಸೈಬಲ್ ತಿಳಿಸಿದೆ.

By

Published : May 24, 2020, 4:36 PM IST

cyber-criminals-leak-personal-data-of-2-dot-9-cr-indians
2.9 ಕೋಟಿ ಉದ್ಯೋಗಾಕಾಂಕ್ಷಿ ಭಾರತೀಯರ ವೈಯಕ್ತಿಕ ಡೇಟಾ ಲೀಕ್​

ನವದೆಹಲಿ:ಸೈಬರ್ ಅಪರಾಧಿಗಳು 2.9 ಕೋಟಿ ಉದ್ಯೋಗಾಕಾಂಕ್ಷಿ ಭಾರತೀಯರ ವೈಯಕ್ತಿಕ ಡೇಟಾವನ್ನು ಡಾರ್ಕ್ ನೆಟ್​​ ಹ್ಯಾಕಿಂಗ್ ಫೋರಂನಲ್ಲಿ ಉಚಿತವಾಗಿ ಪೋಸ್ಟ್ ಮಾಡಿದ್ದಾರೆ ಎಂದು ಆನ್‌ಲೈನ್ ಗುಪ್ತಚರ ಸಂಸ್ಥೆ ಸೈಬಲ್ ತಿಳಿಸಿದೆ.

ಕಂಪನಿಯು ಇತ್ತೀಚೆಗೆ ಫೇಸ್‌ಬುಕ್ ಮತ್ತು ಸಿಕ್ವೊಯಾ ಅನುದಾನಿತ ಭಾರತೀಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಉನಾಕಾಡೆಮಿಯ ಹ್ಯಾಕಿಂಗ್ ಅನ್ನು ಬಹಿರಂಗಪಡಿಸಿತ್ತು.

"29.1 ಮಿಲಿಯನ್ ಭಾರತೀಯ ಉದ್ಯೋಗಾಕಾಂಕ್ಷಿಗಳ ವೈಯಕ್ತಿಕ ವಿವರಗಳಾದ ಇಮೇಲ್, ಫೋನ್, ಮನೆಯ ವಿಳಾಸ, ಅರ್ಹತೆ, ಕೆಲಸದ ಅನುಭವ ಮುಂತಾದ ಸೂಕ್ಷ್ಮ ಮಾಹಿತಿಗಳು ಡಾರ್ಕ್ ನೆಟ್​​ನಲ್ಲಿ ಸೋರಿಕೆಯಾಗಿವೆ. ಸಾಮಾನ್ಯವಾಗಿ ಈ ರೀತಿಯ ಸೋರಿಕೆಗಳು ಸಾರ್ವಕಾಲಿಕವಾಗಿ ಕಾಣಸಿಗುತ್ತೇವೆ. ಆದರೆ, ಈ ಬಾರಿ ಈ ವಿಚಾರ ನಮ್ಮ ಗಮನವನ್ನು ಸೆಳೆಯಲು ಕಾರಣ ಅದು ಹೆಚ್ಚಿನ ಜನರ ವೈಯಕ್ತಿಕ ವಿವರಗಳನ್ನು ಒಳಗೊಂಡಿರುವುದು ಎಂದು ಸೈಬಲ್ ಶುಕ್ರವಾರ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

ABOUT THE AUTHOR

...view details