ಬಲರಾಂಪುರ್(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮೇಲಿಂದ ಮೇಲೆ ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿದ್ದು, ಇದೇ ವಿಚಾರವಾಗಿ ಮಾತನಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಿಳೆಯರ ಮೇಲೆ ಅಪರಾಧ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಹಿಳೆಯರ ಮೇಲಿನ ಅಪರಾಧ ಕ್ಯತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ: ಸಿಎಂ ಯೋಗಿ ಘೋಷಣೆ
ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಪ್ಪಿಸಲು ಯೋಗಿ ಸರ್ಕಾರ ಹೊಸ ಯೋಜನೆ ಜಾರಿಗೊಳಿಸಿದ್ದು, ಅಪರಾಧದಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಹಿಳೆಯರು ದೂರು ನೀಡಲು 1,535 ಪೊಲೀಸ್ ಸ್ಟೇಷನ್ ಪ್ರತ್ಯೇಕವಾಗಿ ತೆರೆಯಲಾಗಿದ್ದು, ಯಾವುದೇ ಭಯವಿಲ್ಲದೇ ಅಲ್ಲಿಗೆ ಹೋಗಿ ದೂರು ದಾಖಲು ಮಾಡಬಹುದು ಎಂದು ತಿಳಿಸಿದ್ದಾರೆ. ಬಲರಾಂಪುರ್ದಲ್ಲಿ 'ಮಿಷನ್ ಶಕ್ತಿ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯೋಗಿ, ಮಹಿಳೆಯ ಭದ್ರತೆಗಾಗಿ ಮಿಷನ್ ಶಕ್ತಿ ಕೆಲಸ ಮಾಡಲಿದೆ ಎಂದರು. ಈ ವೇಳೆ ಯುವತಿಯರು ಆತ್ಮರಕ್ಷಣೆ ತಂತ್ರ ಪ್ರದರ್ಶನ ಮಾಡಿದರು.
ಮಿಷನ್ ಶಕ್ತಿ ಅಭಿಯಾನ ಪ್ರಾರಂಭಿಸಲು ನನಗೆ ತುಂಬಾ ಖುಷಿ ಇದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯ ಭದ್ರತೆ ಮತ್ತು ಗೌರವ ಕಾಪಾಡುವುದು ಇದರ ಉದ್ದೇಶ ಎಂದು ತಿಳಿಸಿದರು. ಆರು ತಿಂಗಳ ಕಾರ್ಯಕ್ರಮ ಇದಾಗಲಿದ್ದು, ಮಹಿಳೆಯ ಮೇಲಿನ ದೌರ್ಜನ್ಯ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಲಖನೌದಲ್ಲಿ ಗವರ್ನರ್ ಆನಂದಿಬೆನ್ ಪಟೇಲ್ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮ 521 ಬ್ಲಾಕ್ಸ್, 59,000 ಗ್ರಾಮ ಪಂಚಾಯ್ತಿ, 630 ನಗರ ಸ್ಥಳೀಯ ಸಂಸ್ಥೆಗಳು, 1,535 ಪೊಲೀಸ್ ಸ್ಟೇಷನ್ ಹಾಗೂ 75 ಜಿಲ್ಲೆಗಳಲ್ಲಿ ಈ ಯೋಜನೆ ಕಾರ್ಯಾರಂಭ ಮಾಡಲಿದೆ. 1090, 181, 1076, 108 ಹಾಗೂ 102 ಸಹಾಯವಾಣಿ ಆಗಿದೆ.