ಕರ್ನಾಟಕ

karnataka

By

Published : Nov 17, 2020, 9:22 PM IST

ETV Bharat / bharat

ದೆಹಲಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ: ಸೈನಿಕ ಶಿಬಿರಗಳ ಸುತ್ತ ಹೈ ಅಲರ್ಟ್​

ಖಚಿತ ಮಾಹಿತಿಯ ಆಧಾರದ ಮೇಲೆ ದೆಹಲಿಯ ಮಿಲೇನಿಯಮ್ ಪಾರ್ಕ್​ನ ಸಾರೈ ಕೇಲ್ ಖಾನ್ ಬಳಿ ರಾತ್ರಿ 10:15ರ ಸುಮಾರಿಗೆ ಬಲೆ ಬೀಸಿ ವಶಕ್ಕೆ ಪಡೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾದ ಶಂಕಿತ ಉಗ್ರರನ್ನು ಬಾರಾಮುಲ್ಲಾದ ನಿವಾಸಿ ಅಬ್ದುಲ್ ಲತೀಫ್ ಮತ್ತು ಮೊಹಮ್ಮದ್ ಎಂದು ತಿಳಿದು ಬಂದಿದೆ.

suspected militants
ಶಂಕಿತ ಉಗ್ರರ ಬಂಧನ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಅಲರ್ಟ್​ ಆಗಿರುವಂತೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಎಚ್ಚರಿಕೆ ನೀಡಿದೆ.

ಉನ್ನತ ಮಟ್ಟದ ಜಾಗರೂಕತೆ ಶಿಬಿರಗಳ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಶಿಬಿರಗಳ ಸುತ್ತ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ ಕಟ್ಟುನಿಟ್ಟಾಗಿ ಗಮನಹರಿಸಲು ಸೈನಿಕರಿಗೆ ಸೂಚಿಸಲಾಗಿದೆ.

ಬಂಧಿತ ಶಂಕಿತರು ಭಯೋತ್ಪಾದಕ ಸಂಘಟನೆಗಳ ಸಹೋದ್ಯೋಗಿಗಳ ಜತೆ ನಂಟು ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ಎಲ್ಲಾ ಶಿಬಿರಗಳಲ್ಲಿ ಸಿಆರ್‌ಪಿಎಫ್ ಭದ್ರತೆಯನ್ನು ಬಿಗಿಗೊಳಿಸಿದೆ ಎಂದು ಮೀಸಲು ಪೊಲೀಸ್ ಪಡೆ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಜನೆಗೊಂಡ ಭಯೋತ್ಪಾದನಾ ನಿರ್ಮೂಲನೆಯ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಆರ್​ಪಿಎಫ್​ ಪಡೆ, ಯಾವುದೇ ರೀತಿಯ ಘಟನೆ ಅಹಿತಕರ ತಪ್ಪಿಸಲು ಎಲ್ಲಾ ವಿಧದ ಭದ್ರತಾ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಹೇಳಿದೆ.

ಶಂಕಿತರಿಬ್ಬರೂ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಮತ್ತು ಕುಪ್ವಾರಾ ಪ್ರದೇಶದವರಾಗಿದ್ದಾರೆ. ದೆಹಲಿ ಪೊಲೀಸ್ ಭಯೋತ್ಪಾದನಾ ವಿರೋಧಿ ವಿಭಾಗದ ವಿಶೇಷ ತಂಡವು ಸೋಮವಾರ ತಡರಾತ್ರಿ ಸಾರೈ ಕೇಲ್ ಖಾನ್ ಬಳಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿತ್ತು.

ಖಚಿತ ಮಾಹಿತಿಯ ಆಧಾರದ ಮೇಲೆ ದೆಹಲಿಯ ಮಿಲೇನಿಯಮ್ ಪಾರ್ಕ್​ನ ಸಾರೈ ಕೇಲ್ ಖಾನ್ ಬಳಿ ರಾತ್ರಿ 10:15ರ ಸುಮಾರಿಗೆ ಬಲೆ ಬೀಸಿ ವಶಕ್ಕೆ ಪಡೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾದ ಶಂಕಿತ ಉಗ್ರರನ್ನು ಬಾರಾಮುಲ್ಲಾದ ನಿವಾಸಿ ಅಬ್ದುಲ್ ಲತೀಫ್ ಮತ್ತು ಮೊಹಮ್ಮದ್ ಎಂದು ತಿಳಿದು ಬಂದಿದೆ.

ABOUT THE AUTHOR

...view details