ಕರ್ನಾಟಕ

karnataka

ETV Bharat / bharat

ಪಟಾಕಿ ನಿಷೇಧ: ವ್ಯಾಪಾರಿಗಳ ನಷ್ಟಕ್ಕೆ ಪರಿಹಾರ ನೀಡಿ ಎಂದ ಸಿಎಐಟಿ

ಪಟಾಕಿ ಮಾರಾಟ ನಿಷೇಧದಿಂದಾಗಿ ಪಟಾಕಿ ವ್ಯಾಪಾರಿಗಳಿಗಾದ ನಷ್ಟಕ್ಕೆ ರಾಜ್ಯ ಸರ್ಕಾರಗಳೇ ಪರಿಹಾರ ನೀಡಬೇಕು ಎಂದು ಸಿಎಐಟಿ ತಿಳಿಸಿದೆ.

cracker
cracker

By

Published : Nov 9, 2020, 2:00 PM IST

ನವದೆಹಲಿ:ಪಟಾಕಿ ಮಾರಾಟವನ್ನು ನಿಷೇಧಿಸಿರುವ ರಾಜ್ಯಗಳು, ನಿಷೇಧದಿಂದ ಪಟಾಕಿ ವ್ಯಾಪಾರಿಗಳಿಗೆ ಆಗಿರುವ ನಷ್ಟವನ್ನು ಸರಿದೂಗಿಸಬೇಕು ಎಂದು ಕಾನ್ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಭಾನುವಾರ ಹೇಳಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳು "ಪಟಾಕಿ ಮಾರಾಟದ ನಿಷೇಧದಿಂದಾಗಿ ಪಟಾಕಿ ವ್ಯಾಪಾರಿಗಳಿಗಾದ ನಷ್ಟಕ್ಕೆ ಪರಿಹಾರ ನೀಡಬೇಕು" ಎಂದು ಸಿಎಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳನ್ನು ನಿಷೇಧಿಸಲು ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಕೇಜ್ರಿವಾಲ್ ಇತ್ತೀಚೆಗೆ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ದೀಪಾವಳಿ, ಕಾಳಿ ಪೂಜಾ ಮತ್ತು ಛತ್ ಪೂಜೆಯಲ್ಲಿ ಪಟಾಕಿ ಬಳಸುವುದನ್ನು ಕಲ್ಕತ್ತಾ ಹೈಕೋರ್ಟ್ ನಿಷೇಧಿಸಿದೆ.

ಒಡಿಶಾ ಮತ್ತು ಸಿಕ್ಕಿಂನ ರಾಜ್ಯ ಸರ್ಕಾರಗಳು ಮುಂಬರುವ ಹಬ್ಬದ ಅವಧಿಯಲ್ಲಿ ವಾಯು ಮಾಲಿನ್ಯ ತಡೆಯಲು ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿವೆ.

ABOUT THE AUTHOR

...view details