ಕರ್ನಾಟಕ

karnataka

ETV Bharat / bharat

ಭಾರತ ಲಾಕ್​ಡೌನ್: ಮುಂದಿನ 3 ವಾರ ದೇಶಕ್ಕೆ ನಿರ್ಣಾಯಕ ಎಂದ ಐಸಿಎಂಆರ್ ವಿಜ್ಞಾನಿಗಳು

ಕೊರೊನಾ ಸೋಂಕು ಹರಡುವುದನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 21 ದಿನಗಳ ಅವಧಿ ತುಂಬಾ ನಿರ್ಣಾಯಕ ಎಂದು ಐಸಿಎಂಆರ್ ವಿಜ್ಞಾನಿಗಳು ಹೇಳಿದ್ದಾರೆ.

By

Published : Mar 25, 2020, 2:58 PM IST

Next 3 weeks crucial for India,ಮುಂದಿನ 3 ವಾರ ದೇಶಕ್ಕೆ ನಿರ್ಣಾಯಕ ಎಂದ ಐಸಿಎಂಆರ್ ವಿಜ್ಞಾನಿಗಳು
ಮುಂದಿನ 3 ವಾರ ದೇಶಕ್ಕೆ ನಿರ್ಣಾಯಕ ಎಂದ ಐಸಿಎಂಆರ್ ವಿಜ್ಞಾನಿಗಳು

ನವದೆಹಲಿ:ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್ ಮಾಡಲು ಕರೆ ನೀಡಿದ್ದರೆ, ವೈರಸ್ ಹರಡುವಿಕೆಯನ್ನು ಎದುರಿಸಲು ಮುಂದಿನ ಮೂರು ವಾರಗಳು ಭಾರತಕ್ಕೆ ನಿರ್ಣಾಯಕ ಎಂದು ಇಂಡಿಯನ್ ಕೌನ್ಸಿಲ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಬಹಳ ಮುಖ್ಯ ಎಂದು ಐಸಿಎಂಆರ್ ಹೇಳಿದೆ. ಕೊರೊನಾ ಸೋಂಕನ್ನು ನಿಗ್ರಹಿಸಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸುರಕ್ಷಿತ ಮಾರ್ಗವಾಗಿದೆ. ಹೀಗಾಗಿ ನಿಮ್ಮ ಮನೆಗಳಲ್ಲೆ ಇರುವುದು ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂಡಿಯನ್ ಕೌನ್ಸಿಲ್ ಮೆಡಿಕಲ್ ರಿಸರ್ಚ್ ಪ್ರಕಾರ, ಭಾರತದಲ್ಲಿ ಸುಮಾರು 536 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ವರದಿ ಮಾಡಿದೆ. ಸೋಂಕಿನ ಹರಡುವಿಕೆಯ ಸರಪಳಿಯನ್ನು ಮುರಿಯುವುದು ಬಹಳ ಮುಖ್ಯ ಎಂದು ವೈದ್ಯಕೀಯ ಸಂಶೋಧನಾ ಸಂಸ್ಥೆಯ ತಜ್ಞರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ಹರಡುವಿಕೆಯ ಸರಳ ಗಣಿತದ ಮಾದರಿಯನ್ನು ಬಳಸಿಕೊಂಡು ಐಸಿಎಂಆರ್ ನಡೆಸಿದ ಅಧ್ಯಯನವು, ಮನೆಯಲ್ಲಿ ಕ್ಯಾರೆಂಟೈನ್ ಆಗಿರುವ ಪ್ರಕರಣಗಳ ಪ್ರಮಾಣವನ್ನು ಶೇಕಡಾ 62 ರಿಂದ ಗರಿಷ್ಠ 89 ರಷ್ಟು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

ABOUT THE AUTHOR

...view details