ಕರ್ನಾಟಕ

karnataka

ETV Bharat / bharat

ಬಾವಲಿಗಳಲ್ಲಿನ ಕೊರೊನಾ ವೈರಸ್ ಮಾನವನ ಮೇಲೆ ಪರಿಣಾಮ ಬೀರುವುದು ಅಪರೂಪ: ಐಸಿಎಂಆರ್

ಬಾವಲಿಗಳಲ್ಲಿ ಕೊರೊನಾ ವೈರಸ್ ಕಂಡುಬರುತ್ತದೆಯೇ ಎಂದು ನಾವು ಪರಿಶಿಲಿಸಿದ್ದೇವೆ. ಎರಡು ಬಗೆಯ ಬಾವಲಿಗಳು ಕೊರೊನ ವೈರಸ್ ಹೊಂದಿರುತ್ತವೆ. ಆದರೆ ಇದು ಮನುಷ್ಯರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿಲ್ಲ. ಬಹುಶಃ ಸಾವಿರ ವರ್ಷಗಳಿಗೊಮ್ಮೆ ಇಂಥ ಪ್ರಕರಣಗಳು ಘಟಿಸಬಹುದು ಎಂದು ಡಾ.ರಾಮನ್ ಗಂಗಖೇಡ್ಕರ್ ತಿಳಿಸಿದರು.

By

Published : Apr 16, 2020, 10:09 AM IST

bat
bat

ನವದೆಹಲಿ:ಬಾವಲಿಗಳಲ್ಲಿನ ಕೊರೊನಾ ವೈರಸ್ ಮಾನವರ ಮೇಲೆ ಪರಿಣಾಮ ಬೀರುವುದು ಅಪರೂಪ. ಬಹುಶಃ ಸಾವಿರ ವರ್ಷಗಳಿಗೊಮ್ಮೆ ಇದು ಘಟಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಬಾವಲಿಗಳಲ್ಲಿ ಕೊರೊನಾ ವೈರಸ್ ಕಂಡುಬರುವುದು ಅಪರೂಪದ ಘಟನೆ ಎಂದು ಕೊರೊನಾ ವೈರಸ್ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಐಸಿಎಂಆರ್ ಮುಖ್ಯ ವಿಜ್ಞಾನಿ ಡಾ.ರಾಮನ್ ಗಂಗಖೇಡ್ಕರ್ ಹೇಳಿದರು.

"ಕೊರೊನಾ ವೈರಸ್ ಬಾವಲಿಗಳಲ್ಲಿಯೂ ಕಂಡುಬರುತ್ತದೆ. ಚೀನಾದಲ್ಲಿ ನಡೆಸಿದ ಸಂಶೋಧನೆಯಲ್ಲಿ, ಬಾವಲಿಗಳು ಮತ್ತು ಸೋಂಕು ಪೀಡಿತ ಮಾನವರ ರೂಪಾಂತರದಿಂದಾಗಿ ಕೊರೊನಾ ವೈರಸ್ ಹುಟ್ಟಿಕೊಂಡಿರಬಹುದು ಎಂದು ತಿಳಿದುಬಂದಿದೆ. ಬಾವಲಿಗಳು ವೈರಸ್​, ಪ್ಯಾಂಗೊಲಿನ್ ಎಂಬ ಸಸ್ತನಿಗಳಿಗೆ ಹರಡಿ, ಪ್ಯಾಂಗೊಲಿನ್​ಗಳಿಂದ ಮಾನವರಿಗೆ ಹರಡಿರುವ ಸಾಧ್ಯತೆಯಿದೆ" ಎಂದು ಡಾ ಗಂಗಖೇಡ್ಕರ್ ಹೇಳಿದರು.

ಭಾರತೀಯ ಜಾತಿಯ ಬಾವಲಿಗಳ ಬಗ್ಗೆ ಐಸಿಎಂಆರ್ ಇತ್ತೀಚೆಗೆ ನಡೆಸಿದ ಸಂಶೋಧನೆಯ ಕುರಿತು ಮಾತನಾಡಿದ ಡಾ. ಖೇಡ್ಕರ್, "ಬಾವಲಿಗಳಲ್ಲಿ ಕೊರೊನಾ ವೈರಸ್ ಕಂಡುಬರುತ್ತದೆಯೇ ಎಂದು ನಾವು ಪರಿಶಿಲಿಸಿದ್ದೇವೆ. ಎರಡು ಬಗೆಯ ಬಾವಲಿಗಳು ಕೊರೊನ ವೈರಸ್ ಹೊಂದಿರುತ್ತವೆ. ಆದರೆ ಇದು ಮನುಷ್ಯರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರಲಿಲ್ಲ" ಎಂದು ತಿಳಿಸಿದರು.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಅಧ್ಯಯನವು ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡಿನಲ್ಲಿರುವ ಬಾವಲಿಗಳ ಪ್ರಭೇದಗಳಲ್ಲಿ ಬ್ಯಾಟ್ ಕೊರೊನಾ ವೈರಸ್ ಇರುವುದು ಕಂಡುಬಂದಿದೆ.

ಚೀನಾದ ವುಹಾನ್‌ನಿಂದ ಹರಡಿದ ಕೊರೊನಾ ವೈರಸ್ ಬಾವಲಿಗಳಿಂದ ಹುಟ್ಟಿಕೊಂಡಿದೆ ಎಂದು ಕೆಲ ಅಧ್ಯಯನಗಳು ತಿಳಿಸಿವೆ. ಈ ವೈರಸ್​ನ ಎಟಿಯಾಲಜಿ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ABOUT THE AUTHOR

...view details