ಕರ್ನಾಟಕ

karnataka

ETV Bharat / bharat

ಅಕ್ರಮ ಮದ್ಯ ಮಾರಾಟ ಅಡ್ಡೆ ಮೇಲೆ ದಾಳಿ: ನಾಡ ಬಾಂಬ್​ ಸಿಡಿದು ಕಾನ್​ಸ್ಟೇಬಲ್​ಗೆ ಗಾಯ ​ - ಅಕ್ರಮ ಮದ್ಯ ಮಾರಾಟ ಮೇಲೆ ಪೊಲೀಸ್​ ದಾಳಿ

ಕೊಯಮತ್ತೂರಿನಲ್ಲಿ ನಾಡ ಬಾಂಬ್ ಸಿಡಿದು ಪೊಲೀಸ್ ಕಾನ್‌ಸ್ಟೇಬಲ್ ಗಾಯಗೊಂಡಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದಾಗ ಈ ಘಟನೆ ನಡೆದಿದೆ.

Constable injured after seized crude bomb explodes
ನಾಡ ಬಾಂಬ್​ ಸಿಡಿದು ಗಾಯಗೊಂಡ ಕಾನ್​ಸ್ಟೇಬಲ್​

By

Published : Apr 15, 2020, 7:37 PM IST

ಕೊಯಮತ್ತೂರು(ತಮಿಳುನಾಡು):ಅಕ್ರಮ ಮದ್ಯ ಮಾರುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಸಮಯದಲ್ಲಿ ನಾಡ ಬಾಂಬ್​ ಸ್ಫೋಟಗೊಂಡು ಓರ್ವ ಪೊಲೀಸ್​​ ಕಾನ್​ಸ್ಟೇಬಲ್​ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಸೆಂಥಿಲ್‌ಕುಮಾರ್ ಗಾಯಗೊಂಡಿರುವ ಕಾನ್​ಸ್ಟೇಬಲ್​. ಇವರು ಗ್ರಾಮೀಣ ಪೊಲೀಸರ ನಿಷೇಧ ಜಾರಿ ವಿಭಾಗದಲ್ಲಿ (ಪಿಇಡಬ್ಲ್ಯು)ಕಾರ್ಯ ನಿರ್ವಹಿಸುತ್ತಿದ್ದರು. ಕುಪ್ಪನೂರು ಗ್ರಾಮದ ಅಥಿಕುಟ್ಟೈನ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಪೆರಿಯಾನಿಕೆನ್ಪಾಲಯಂ ಪಿಇಯು ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.

ದಾಳಿಯಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಬಾಂಬ್​ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು, ಮದ್ಯ ಸಾಗಿಸುತ್ತಿದ್ದ ಫಾರ್ಮ್​ನ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details