ಕರ್ನಾಟಕ

karnataka

ETV Bharat / bharat

ದೇಶಾದ್ಯಂತ 560 ಜಿಲ್ಲೆಗಳು ಸ್ತಬ್ಧ: ಲಾಕ್​ಡೌನ್​ ಇಲ್ಲದ ರಾಜ್ಯಗಳಾವುವು ಗೊತ್ತಾ..?

lockdown list
ಲಾಕ್​ಡೌನ್​ ಆದ ಜಿಲ್ಲೆಗಳು

By

Published : Mar 24, 2020, 11:39 AM IST

Updated : Mar 24, 2020, 1:45 PM IST

11:33 March 24

ದೇಶದ 560 ಜಿಲ್ಲೆಗಳು ಸಂಪೂರ್ಣ ಸ್ತಬ್ಧ

ನವದೆಹಲಿ: ಕೊರೊನಾ ಹರಡದಂತೆ ತಡೆಯಲು ಕೆಲವು ರಾಜ್ಯಗಳನ್ನು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಲಾಕ್​ ಡೌನ್​ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೇಶದ ಒಟ್ಟು 720ರಲ್ಲಿ 560 ಜಿಲ್ಲೆಗಳಲ್ಲಿ ಲಾಕ್​ ಡೌನ್​ ಘೋಷಣೆ ಮಾಡಲಾಗಿದೆ. ಮಧ್ಯಪ್ರದೇಶ, ಒಡಿಶಾ ರಾಜ್ಯಗಳಲ್ಲಿ ಹಲವು ಜಿಲ್ಲೆಗಳಲ್ಲಿ ಲಾಕ್​ ಡೌನ್​ ಮಾಡಲಾಗಿದ್ದು ಸುಮಾರು 58 ಜಿಲ್ಲೆಗಳನ್ನು ಸ್ತಬ್ಧಗೊಳಿಸಲಾಗಿದೆ.  

ಇನ್ನೂ ಹಲವು ರಾಜ್ಯಗಳನ್ನು ಸಂಪೂರ್ಣವಾಗಿ ಲಾಕ್​ ಡೌನ್​ ಮಾಡಿಲ್ಲ. ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಜನರ ಚಟುವಟಿಕೆಗಳು ಹೆಚ್ಚಾದ ಕಾರಣದಿಂದ ಲಾಕ್​ ಡೌನ್​ ವ್ಯಾಪ್ತಿಗೆ ಒಳಪಡಿಸಲಾಗಿದೆ. ದೇಶದಲ್ಲಿ ಮಿಜೋರಾಂ ಹಾಗೂ ಸಿಕ್ಕಿಂ ರಾಜ್ಯಗಳನ್ನು ಹೊರತುಪಡಿಸಿ ಇನ್ನೆಲ್ಲಾ ರಾಜ್ಯಗಳಲ್ಲಿ ಲಾಕ್​ ಡೌನ್​ ಘೋಷಣೆ ಮಾಡಲಾಗಿದೆ.  

ಕೊರೊನಾ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.  446 ಮಂದಿ ಸೋಂಕಿತರು ಪತ್ತೆಯಾದ ಕಾರಣದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಲಾಕ್​ ಡೌನ್​ ಘೋಷಣೆಯಾದ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳ ಹೊರತಾಗಿ ಎಲ್ಲವೂ ಸ್ತಬ್ಧಗೊಳ್ಳಲಿದೆ.

Last Updated : Mar 24, 2020, 1:45 PM IST

ABOUT THE AUTHOR

...view details