ಕರ್ನಾಟಕ

karnataka

ETV Bharat / bharat

ಪ್ರಧಾನಿ ಭೇಟಿ ಮಾಡಿದ ಮಧ್ಯಪ್ರದೇಶ ಸಿಎಂ: ರಾಜ್ಯದ ಅಭಿವೃದ್ಧಿ ಕುರಿತು ಮೋದಿ ಜೊತೆ ಚೌಹಾಣ್​ ಮಾತುಕತೆ

ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕಳೆದ ಎಂಟು ತಿಂಗಳಲ್ಲಿ ಮಧ್ಯಪ್ರದೇಶ ರಾಜ್ಯದ ಸಾಧನೆಗಳ ಜೊತೆಗೆ ರಾಜ್ಯದಲ್ಲಿ ಪ್ರಮುಖ ಯೋಜನೆಗಳ ಪ್ರಗತಿಯ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಕೇಂದ್ರವು ಇತ್ತೀಚೆಗೆ ರಾಜ್ಯಕ್ಕೆ ಬಿಡುಗಡೆ ಮಾಡಿದ ಅನುದಾನಕ್ಕೆ ಪ್ರಧಾನಿಗೆ ಚೌಹಾಣ್​ ಧನ್ಯವಾದ ತಿಳಿಸಿದ್ದಾರೆ.

By

Published : Dec 2, 2020, 7:35 AM IST

Updated : Dec 2, 2020, 8:47 AM IST

CM Chouhan discusses roadmap for a self-reliant Madhya Pradesh with PM Modi
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಭೂಪಾಲ್​(ಮಧ್ಯಪ್ರದೇಶ): ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​​ ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಧ್ಯಪ್ರದೇಶದ ಮುಂದಿನ ಮೂರು ವರ್ಷಗಳ ಅಭಿವೃದ್ಧಿ ಕುರಿತಂತೆ ಚರ್ಚಿಸಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಮಧ್ಯಪ್ರದೇಶದಲ್ಲಿ ವಿವಿಧ ಯೋಜನೆಗಳ ಅಭಿವೃದ್ಧಿ, ಪ್ರಗತಿ ಮತ್ತು ಅನುಷ್ಠಾನದ ಬಗ್ಗೆ ಚರ್ಚಿಸಿದೆ" ಎಂದು ಸಿಎಂ ಚೌಹಾಣ್​ ತಿಳಿಸಿದ್ದಾರೆ. "ನಾವು ಮೂಲಸೌಕರ್ಯ, ಉತ್ತಮ ಆಡಳಿತ, ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕತೆ ಮತ್ತು ಉದ್ಯೋಗದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ್ದೇವೆ". ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಕೂಡ ಭೇಟಿ ಮಾಡಿದ್ದಾಗಿ ಅವರು ತಿಳಿಸಿದ್ರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಈ ಕುರಿತು ಟ್ವೀಟ್​ ಮಾಡಿರುವ ಚೌಹಾಣ್​​ "ನಾನು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ತೋಮರ್ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಮಧ್ಯಪ್ರದೇಶದ ಕೃಷಿ ಮತ್ತು ಮಧ್ಯಪ್ರದೇಶದಲ್ಲಿ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೇನೆ" ಎಂದು ಟ್ವೀಟ್​ನಲ್ಲಿ ಸಿಎಂ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಕೋವಿಡ್​-19 ವ್ಯಾಕ್ಸಿನ್​​ ಬಗ್ಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಸಿಎಂ ಚೌವ್ಹಾಣ್​ ವ್ಯಾಕ್ಸಿನೇಷನ್‌ ನೀಡುವಲ್ಲಿ ಹಿರಿಯ ನಾಗರೀಕರಿಗೆ ಆದ್ಯತೆ ಸಿಗುವಂತೆ ಅಭಿಯಾನ ನಡೆಸಬೇಕು" ಎಂದು ಅಭಿಪ್ರಾಯಿಸಿದ್ರು. ನಮ್ಮ ಯುವಜನತೆ , ಸಂಪೂರ್ಣವಾಗಿ ಆರೋಗ್ಯವಂತರು, ಸ್ವಯಂಪ್ರೇರಣೆಯಿಂದ ಕೊರೊನಾವನ್ನು ಹಿಮ್ಮೆಟ್ಟಿಸುತ್ತಾರೆ ಹಾಗೂ ಅನಾರೋಗ್ಯ ಪೀಡಿತರಿಗೆ ಮೊದಲು ಕೊರೊನಾ ಲಸಿಕೆ ಹಾಕಲು ಅವಕಾಶ ಮಾಡಿಕೊಡುತ್ತಾರೆ. ಯಾವ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆಯೋ ಆ ಪ್ರದೇಶಗಳಿಗೆ ಆದ್ಯತೆ ಸಿಗುತ್ತದೆ" ಎಂದು ಚೌಹಾಣ್​ ಟ್ವೀಟ್ ಮಾಡಿದ್ದಾರೆ.

Last Updated : Dec 2, 2020, 8:47 AM IST

ABOUT THE AUTHOR

...view details