ಕರ್ನಾಟಕ

karnataka

ETV Bharat / bharat

ಕಾರಾಗೃಹದಲ್ಲಿ ಪೊಲೀಸರ ಮೇಲೆ ಕೈದಿಗಳ ದಾಳಿ: ಎಸ್ಕೇಪ್ ಆಗುತ್ತಿದ್ದವರು ಮತ್ತೆ ಜೈಲು ಪಾಲು

ಲೂಧಿಯಾನಾ ಕೇಂದ್ರ ಕಾರಾಗೃಹದಲ್ಲಿ ಇಂದು ಮಧ್ಯಾಹ್ನ ಜೈಲಿನಲ್ಲಿ ಗಲಭೆ ಸಂಭವಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಗಲಭೆ ವೇಳೆ ಜೈಲಿನೊಳಗೆ ಬೆಂಕಿ ಸಹ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಸದ್ಯ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ, ಪರಿಸ್ಥಿತಿ ತಿಳಿಗೊಳಿಸಲಾಗಿದೆ.

By

Published : Jun 27, 2019, 4:12 PM IST

Updated : Jun 27, 2019, 5:16 PM IST

ಲೂಧಿಯಾನ್ ಕೇಂದ್ರ ಕಾರಾಗೃಹ

ಲೂಧಿಯಾನ( ಪಂಜಾಬ್​): ಲೂಧಿಯಾನಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು, ಪೊಲೀಸರ ಮೇಲೆ ದಾಳಿ ನಡೆಸಿದ ಪರಿಣಾಮ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿ ಆರು ಮಂದಿ ಗಾಯಗೊಂಡಿದ್ದಾಗಿ ತಿಳಿದುಬಂದಿದೆ.

ಲೂಧಿಯಾನಾ ಕೇಂದ್ರ ಕಾರಾಗೃಹದಲ್ಲಿ ಗಲಭೆ

ಇಂದು ಮಧ್ಯಾಹ್ನ ಜೈಲಿನಲ್ಲಿ ಗಲಭೆ ಸಂಭವಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಗಲಭೆ ವೇಳೆ ಜೈಲಿನೊಳಗೆ ಬೆಂಕಿ ಸಹ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಸದ್ಯ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ, ಪರಿಸ್ಥಿತಿ ತಿಳಿಗೊಳಿಸಲಾಗಿದೆ.

ಗಲಭೆಯಲ್ಲಿ ಒಬ್ಬ ಮೃತಪಟ್ಟಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದ್ದು, ಪೊಲೀಸರು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಪಂಜಾಬ್ ಸಿಎಂ ಅಮರಿಂದರ್​ ಸಿಂಗ್​ ಅವರಿಗೆ ಈ ಬಗ್ಗೆ ಮಾಹಿತಿ ಹೋಗಿದೆ ಎನ್ನಲಾಗ್ತಿದೆ.

ಜೈಲಿನಲ್ಲಿ ಗಲಾಟೆ ನಡೆಯುತ್ತಿದ್ದ ವೇಳೆ ನಾಲ್ವರು ಕೈದಿಗಳು ಪರಾರಿಯಗಾಲು ಸಹ ಯತ್ನಿಸಿದರು. ಆನಂತರ ಅವರನ್ನು ಬಂಧಿಸಿ, ಮತ್ತೆ ಜೈಲಿಗೆ ದೂಡಲಾಗಿದೆ. ಸದ್ಯ ಜೈಲಿಗೆ ಡೆಪ್ಯುಟಿ ಕಮೀಷನರ್​ ಪ್ರದೀಪ್ ಕುಮಾರ್​ ಅಗರ್ವಾಲ್ ಅವರು ಆಗಮಿಸಿ, ಘಟನೆಯ ಮಾಹಿತಿ ಪಡೆದರು.

Last Updated : Jun 27, 2019, 5:16 PM IST

For All Latest Updates

TAGGED:

ABOUT THE AUTHOR

...view details