ಕರ್ನಾಟಕ

karnataka

ETV Bharat / bharat

ಎಎಪಿ ಟಿಕೆಟ್​ಗೆ 6 ಕೋಟಿ... ಆರೋಪಕ್ಕೆ ಉತ್ತರ ನೀಡಲು ಬಿಜೆಪಿ ಸವಾಲು!

ನನ್ನ ತಂದೆ ಶ್ರೀ ಬಲಬೀರ್​ ಸಿಂಗ್​ ಜಾಖಡ್ ಎಂಪಿ​ ಟಿಕೆಟ್​ಗಾಗಿ ಕೇಜ್ರಿವಾಲ್​ಗೆ 6 ಕೋಟಿ ನೀಡಿದ್ದಾರೆ. ಗಲ್ಲುಶಿಕ್ಷೆಗೆ ಗುರಿಯಾಗಿರುವ ಕ್ರಿಮಿನಲ್​ಗಳನ್ನು ಬಿಡಿಸುವ ಇಂತವರಿಗೆ ಟಿಕೆಟ್​ ನೀಡಬೇಕೆ?. ಸಾಮಾನ್ಯ ಜನರ ಪರ ಎಂದು ಹೇಳಿಕೊಳ್ಳುವ ಕೇಜ್ರೀವಾಲ್​ 6 ಕೋಟಿ ಮಾರಾಟವಾದರೇ?- ಬಲಬೀರ್​ ಸಿಂಗ್​ ಜಾಖಡ್ ಪುತ್ರ ಉದಯ್​ ಆರೋಪ

By

Published : May 12, 2019, 1:02 AM IST

ಬಲಬೀರ್​ ಸಿಂಗ್​ ಜಾಖಡ್ ಪುತ್ರ ಉದಯ್​ ಜಾಖಡ್

ನವದೆಹಲಿ:ಪಶ್ಚಿಮ ದೆಹಲಿ ಟಿಕೆಟ್​ಗಾಗಿ ಬಲ್​ಬೀರ್ ಸಿಂಗ್​ ಜಾಖಡ್​ ಸಿಎಂ ಅರವಿಂದ್ ಕೇಜ್ರಿವಾಲ್​ ಅವರಿಗೆ ಆರು ಕೋಟಿ ರೂ. ಲಂಚ ನೀಡಿದ್ದೇವೆ ಎಂದು ಜಾಖಡ್​ ಪುತ್ರ ಉದಯ್​ ಆರೋಪಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು, ಟಿಕೆಟ್​ಗಾಗಿ ಅರವಿಂದ್ ಕೇಜ್ರಿವಾಲ್​ ಅವರಿಗೆ ತಾವು 6 ಕೋಟಿ ರೂ.ನೀಡಿರುವುದಾಗಿ ನನ್ನ ತಂದೆ ಹೇಳಿದ್ದಾರೆ. ಆದರೆ, ಈ ಬಗ್ಗೆ ಹೇಳಿಕೆ ನೀಡಲು ಜಾಖರ್​ ನಿರಾಕರಿಸಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಪಶ್ಚಿಮ ಕ್ಷೇತ್ರದ ಎಎಪಿ ಅಭ್ಯರ್ಥಿ ಜಾಖರ್​ ಹೇಳಿದ್ದಾರೆ.

ಈ ನಡುವೆ ಬಲ್ಬೀರ್​ ಸಿಂಗ್​ ಜಾಖರ್​ ಪುತ್ರ ಮಾತ್ರ ಕೇಜ್ರಿವಾಲ್​ ಅವರಿಂದ ಇಂತಹ ಧೋರಣೆ ನಿರೀಕ್ಷಿಸಿರಲಿಲ್ಲ.ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಡಿದ ವ್ಯಕ್ತಿ ಇವರೇನಾ ಎಂದು ಉದಯ್​ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಉದಯ್​ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಸಿಎಂ ಅರವಿಂದ್ ಕೇಜ್ರಿವಾಲ್​ ಉತ್ತರಿಸಬೇಕು ಎಂದು ಪಟ್ಟು ಹಿಡಿದಿದೆ. ಈ ಸಂಬಂಧ ಮಾತನಾಡಿದ ದೆಹಲಿ ಬಿಜೆಪಿ ವಕ್ತಾರ ವಿಜೇಂದ್ರ ಗುಪ್ತಾ, ರಾಜ್ಯಸಭೆ ಚುನಾವಣೆಯಲ್ಲೂ ಕೇಜ್ರಿವಾಲ್ ಹಣ ಪಡೆದಿದ್ದ ಆರೋಪ ವ್ಯಕ್ತವಾಗಿತ್ತು. ಈಗ ಎಎಪಿ ಪಕ್ಷದ ಅಭ್ಯರ್ಥಿಯ ಪುತ್ರನೇ ಈ ಬಗ್ಗೆ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್​ ಉತ್ತರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಕೇಜ್ರಿವಾಲ್​ ಸಿಖ್​ ವಿರೋಧಿ ಎಂದು ಬಿಜೆಪಿ ಆರೋಪಿಸಿದೆ.

ABOUT THE AUTHOR

...view details