ಕರ್ನಾಟಕ

karnataka

ETV Bharat / bharat

ಯುವಕರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಲು ಕಾರಣ ಯಾರು ಗೊತ್ತಾ? ಪ್ರಧಾನಿ ಮಾತಲ್ಲೇ ಕೇಳಿ!

ಚಂದ್ರಯಾನ-2 ಮಿಷನ್​​ ನಮ್ಮ ಭಾರತದ ವಿಜ್ಞಾನಿಗಳ ಸಾಧನೆ, ಇದರಿಂದಾಗಿ ದೇಶದ ಯುವಕರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಮೋದಿ ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಇಸ್ರೋ ವಿಜ್ಞಾನಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

By

Published : Nov 6, 2019, 9:56 AM IST

Updated : Nov 6, 2019, 10:06 AM IST

ಪ್ರಧಾನಿ ಮೋದಿ

ಕೋಲ್ಕತ್ತಾ (ವೆಸ್ಟ್​​​ ಬೆಂಗಾಲ್​​):ಚಂದ್ರಯಾನ್ -2 ಮಿಷನ್ ಭಾರತದ ನವ ಯುವಕರಲ್ಲಿ ವಿಜ್ಞಾನದ ಬಗ್ಗೆ ಅತೀವ ಕುತೂಹಲ ಹುಟ್ಟುಹಾಕಿರುವಂತಹದ್ದು ಎಂದು ಹೇಳುವ ಮೂಲಕ ಭಾರತೀಯ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ, ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದೆ ವಿಶ್ವದ ಯಾವುದೇ ದೇಶವು ಪ್ರಗತಿಯಾಗಲು ಸಾಧ್ಯವಿಲ್ಲ. ವಿಜ್ಞಾನದಲ್ಲಿ ಎಂದಿಗೂ ವೈಫಲ್ಯ ಎಂಬುದು ಇಲ್ಲ ಕೇವಲ ಪ್ರಯತ್ನಗಳು, ಪ್ರಯೋಗಗಳು ಮತ್ತು ಯಶಸ್ಸು ಮಾತ್ರ ಇವೆ. ನೀವು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿದರೆ, ವಿಜ್ಞಾನ ಅಥವಾ ನಿಮ್ಮ ಜೀವನದ ಹಾದಿಯಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​​ ಮೂಲಕ ಹೇಳಿದರು.

ಪ್ರಧಾನಿ ಮೋದಿ

ವಿಜ್ಞಾನ ಎಂಬುದು ತ್ವರಿತಗತಿಯಲ್ಲಿ ನ್ಯೂಡಲ್ಸ್​​ ಅಥವಾ ಫಿಜ್ಜಾ ತಯಾರಿಸಿದಂತಲ್ಲ. ಅದೊಂದು ನಿರಂತರ ಸಾಧನೆ ಇದ್ದಂತೆ. ಆವಿಷ್ಕಾರಗಳು ತಕ್ಷಣದ ಫಲಿತಾಂಶ ನೀಡದೇ ಇರಬಹುದು ಆದರೆ, ಭವಿಷ್ಯದಲ್ಲಿ ಪ್ರಯೋಜನಕಾರಿಯಾಗುತ್ತದೆ ಎಂದು ತಿಳಿಸಿದರು.

ಚಂದ್ರನ ಮೇಲೆ ಇಳಿಯುವ ಕೆಲ ಸಮಯಕ್ಕೂ ಮುನ್ನ ವಿಕ್ರಮ್​ ಲ್ಯಾಂಡರ್​​ ಸಂಪರ್ಕ ಕಡಿತಗೊಂಡಿತ್ತು. ಒಂದೊಮ್ಮೆ ಇದು ಯಶಸ್ವಿಯಾಗಿದ್ದರೆ ನಮ್ಮ ದೇಶವು ಯುಎಸ್, ರಷ್ಯಾ ಮತ್ತು ಚೀನಾದಂತೆ ಇತಿಹಾಸ ಪುಟ ಸೇರುತ್ತಿತ್ತು ಎಂದರು. ನಮ್ಮ ದೇಶದಿಂದ ಈ ಜಗತ್ತಿಗೆ ಹಲವಾರು ವಿಜ್ಞಾನಿಗಳನ್ನ ಕೊಟ್ಟಿದ್ದೇವೆ. ಚಂದ್ರಯಾನ-2 ಮಿಷನ್​ ಸಂಪೂರ್ಣ ಯಶಸ್ವಿಯಾಗದಿದ್ದರೂ ನಮ್ಮ ಇಸ್ರೋ ವಿಜ್ಞಾನಿಗಳ ಕಾರ್ಯ ಮೆಚ್ಚುವಂತದ್ದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಚಂದ್ರಯಾನ-2 ಹಾಗೂ ವಿವಿಧ ವೈಜ್ಞಾನಿಕ ಸಂಶೋಧನೆಗಳು ದೇಶದ ಯುವಕರಲ್ಲಿ ಕುತೂಹಲ ಮತ್ತು ಪ್ರೇರಣೆಯನ್ನು ಸೃಷ್ಟಿಸಿದೆ. ಯುವಜನತೆಯ ಕುತೂಹಲವನ್ನ ಹೆಚ್ಚಿಸುವುದು ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ, ಮಾನವೀಯ ಮೌಲ್ಯಗಳೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಳನ್ನು ಕೊಂಡುಯ್ಯುವುದು ಹಾಗೂ ದೇಶದಾದ್ಯಂತ ವೈಜ್ಞಾನಿಕ ಮನೋಭಾವವು ವಿಭಿನ್ನ ಮಟ್ಟದಲ್ಲಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.

Last Updated : Nov 6, 2019, 10:06 AM IST

ABOUT THE AUTHOR

...view details