ಕರ್ನಾಟಕ

karnataka

ETV Bharat / bharat

ಸಿಬಿಎಸ್‌ಇ ವಿದ್ಯಾರ್ಥಿಗಳು 11 ನೇ ತರಗತಿಯಲ್ಲಿ ಗಣಿತವನ್ನು ಆಯ್ಕೆ ಮಾಡಬಹುದು: CBSC ಅಧಿಸೂಚನೆ - CBSE Class 11 Admissions 2020

ಸಿಬಿಎಸ್​ಇ10 ನೇ ತರಗತಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಮೂಲ ಗಣಿತ ಪತ್ರಿಕೆಯಲ್ಲಿ ಅರ್ಹತೆ ಪಡೆದಿದ್ದರೇ, ಅಂತವರು 11ನೇ ತರಗತಿಯಲ್ಲಿ ಗಣಿತವನ್ನು ಆರಿಸಿಕೊಳ್ಳಬಹುದು ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಹೇಳಿದ್ದಾರೆ.

CBSC ಅಧಿಸೂಚನೆ
CBSC ಅಧಿಸೂಚನೆ

By

Published : Aug 17, 2020, 7:17 PM IST

ನವದೆಹಲಿ:ಹತ್ತನೇ ತರಗತಿಯಲ್ಲಿ ಗಣಿತ ವಿಷಯವನ್ನು ಪಾಸ್​ ಮಾಡಿರುವ ವಿದ್ಯಾರ್ಥಿಗಳು, 2020ರ 11ನೇ ತರಗತಿಯ ಪ್ರವೇಶದ ವೇಳೆ ಗಣಿತ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಇತ್ತೀಚಿನ ಅಧಿಸೂಚನೆಯಲ್ಲಿ ತಿಳಿಸಿದೆ.

ಅಲ್ಲದೇ, ಈ ವಿದ್ಯಾರ್ಥಿಗಳು 2020ರಲ್ಲಿ ನಡೆಯಲಿರುವ ಸಿಬಿಎಸ್‌ಇ ವಿಭಾಗೀಯ ಪರೀಕ್ಷೆಗಳಲ್ಲಿನ ಸ್ಟ್ಯಾಂಡರ್ಡ್ ಮ್ಯಾಥ್ ಪೇಪರ್‌ಗೆ ಹಾಜರಾಗಬೇಕಾಗಿಲ್ಲ. ಕೊರೊನಾ ಹಿನ್ನೆಲೆ ಈ ಕ್ರಮವನ್ನು ಜಾರಿಗೆ ತರಲಾಗಿದ್ದು, ಇದಕ್ಕೆ ಅನೇಕ ಶಿಕ್ಷಣ ತಜ್ಞರು ಸಹಮತ ನೀಡಿದ್ದಾರೆ ಎಂದು ಮಂಡಳಿ ಹೇಳಿದೆ.

ಸಾಂಕ್ರಾಮಿಕ ರೋಗದಿಂದಾಗಿ ಅನಿರ್ದಿಷ್ಟ ಕಾಯುವಿಕೆಯನ್ನು ಕೊನೆಗೊಳಿಸುವ ಸಲುವಾಗಿ ಈ ನಿರ್ಧಾರವನ್ನು ಮಂಡಳಿ ತೆಗೆದುಕೊಂಡಿದೆ. ಸಿಬಿ ಎಸ್‌ಇ ವಿಭಾಗೀಯ ಪರೀಕ್ಷೆಗಳನ್ನು ನಡೆಸುವಲ್ಲಿ ವಿಳಂಬವಾಗಿದೆ. ಹಾಗಾಗಿ 10 ನೇ ತರಗತಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಮೂಲ ಗಣಿತ ಪತ್ರಿಕೆಯಲ್ಲಿ ಅರ್ಹತೆ ಪಡೆದಿದ್ದರೇ, ಅಂತವರು 11ನೇ ತರಗತಿಯಲ್ಲಿ ಗಣಿತವನ್ನು ಆರಿಸಿಕೊಳ್ಳಬಹುದು ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಹೇಳಿದ್ದಾರೆ.

11 ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಗಣಿತವನ್ನು ನಿಭಾಯಿಸಲು ವಿಫಲವಾದರೆ, ಅವರು 12 ನೇ ತರಗತಿಯಲ್ಲಿ ಶೈಕ್ಷಣಿಕ ಅನ್ವಯಿಕ ಗಣಿತವನ್ನು ಆರಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಈ ವಿಷಯದ ಬಗ್ಗೆ ವಿದ್ಯಾರ್ಥಿಗಳ ಯೋಗ್ಯತೆಯನ್ನು ಸಂಬಂಧಪಟ್ಟ ಶಾಲಾ ಪ್ರಾಂಶುಪಾಲರು ಪರಿಶೀಲಿಸಬೇಕಾಗುತ್ತದೆ ಎಂದರು.

ABOUT THE AUTHOR

...view details