ಕರ್ನಾಟಕ

karnataka

ETV Bharat / bharat

ಮಾಜಿ ಸಿಎಂ ಮನೆ ಮೇಲೆ ಸಿಬಿಐ ದಾಳಿ... ₹ 26 ಲಕ್ಷ ಅಮಾನ್ಯಗೊಂಡ ನೋಟು ಪತ್ತೆ!

ಮಾಜಿ ಮುಖ್ಯಮಂತ್ರಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ ವೇಳೆ ಬರೋಬ್ಬರಿ 26 ಲಕ್ಷ ರೂ ಅಮಾನ್ಯಗೊಂಡಿರುವ ನೋಟುಗಳು ಪತ್ತೆಯಾಗಿವೆ.

By

Published : Nov 23, 2019, 3:11 AM IST

ಸಿಬಿಐ ದಾಳಿ

ಇಂಪಾಲ್​​​:ಸರ್ಕಾರದ ಹಣ ದುರ್ಬಳಿಕೆ ಮಾಡಿಕೊಂಡ ಆರೋಪದಡಿ ಮಣಿಪುರದ ಮಾಜಿ ಮುಖ್ಯಮಂತ್ರಿ ಒ ಇಬೊಬಿ ಸಿಂಗ್​ ಮೇಲೆ ಸಿಬಿಐ ದಾಳಿ ನಡೆಸಿದ್ದು, ಈ ವೇಳೆ ಅವರ ಮನೆಯಲ್ಲಿ ₹ 26.49 ಲಕ್ಷ ಅಮಾನ್ಯಗೊಂಡ ನೋಟು ಪತ್ತೆಯಾಗಿವೆ.

ಸರ್ಕಾರದ 322 ರೂ ಕೋಟಿ ಹಣ ದುರ್ಬಳಿಕೆ ಮಾಡಿಕೊಂಡ ಆರೋಪದ ಮೇಲೆ ಸಿಬಿಐ ಕೆಲ ಐಎಎಸ್​ ಅಧಿಕಾರಿಗಳು ಹಾಗೂ ಮಾಜಿ ಸಿಎಂ ಇಬೊಬಿ ಸಿಂಗ್​ ಮನೆ ಮೇಲೆ ದಾಳಿ ಮಾಡಿದೆ. ಕೇಂದ್ರೀಯ ತನಿಖಾ ದಳ ದಾಳಿ ನಡೆಸುತ್ತಿದ್ದಂತೆ ಮಾಜಿ ಸಿಎಂ ಮನೆಯಲ್ಲಿ 2016ರಲ್ಲೇ ಅಮಾನ್ಯಗೊಂಡಿರುವ 1000ರೂ ಹಾಗೂ 500ರೂ ಮುಖಬೆಲೆಯ ಹಳೇ ನೋಟು ಪತ್ತೆಯಾಗಿವೆ. ಇದೇ ವೇಳೆ ಕೆಲ ಐಷಾರಾಮಿ ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಸಹ ಹೊರಬಿದ್ದಿದೆ.

ಮಣಿಪುರ ಮಾಜಿ ಸಿಎಂ

ಮಣಿಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲು ಇಟ್ಟಿದ್ದ 518 ಕೋಟಿ ರೂಪಾಯಿಯಲ್ಲಿ 332 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇಬೋಬಿ ಸಿಎಂ ಆಗಿದ್ದ 2009-2017ರ ನಡುವಿನ ಅವಧಿಯಲ್ಲೇ ಈ ಘಟನೆ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ತಮ್ಮ ನಿವಾಸದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿಂಗ್​​ ಸಿಬಿಐ ದಾಳಿ ಸ್ವಾಗತಿಸಿದ್ದು, ತನಿಖೆ ನಂತರ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದ್ದಾರೆ. ಜತೆಗೆ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ ಎಂದಿದ್ದಾರೆ.

ABOUT THE AUTHOR

...view details