ಕೊಂಡಗಾಂವ್/ಕೇಶ್ಕಾಲ್(ಛತ್ತೀಸ್ಗಢ):ರಾಷ್ಟ್ರೀಯ ಹೆದ್ದಾರಿ 30ರ ಬಳಿಯ ಆವರ್ಭಾಠಾ ಗ್ರಾಮದ ಬಳಿ ಸರ್ಕಾರಿ ವಾಹನ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸರ್ಕಾರಿ ವಾಹನ, ಕಾರಿನ ನಡುವೆ ಭೀಕರ ಅಪಘಾತ: ಮೂವರು ಸಾವು ಇನ್ನಿಬ್ಬರು ಯುವಕರನ್ನು ರಾಯ್‌ಪುರಕ್ಕೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಇತ್ತ ಸರ್ಕಾರಿ ವಾಹನದಲ್ಲಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಫರ್ಸ್‌ಗಾಂವ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಕಾರಿನಲ್ಲಿದ್ದ ರಾಜು ಪಾಂಡೆ, ಸಂತೋಷ್ ಪಾಟೀಲ್ ಮತ್ತು ಅನಿಲ್ ಸಿನ್ಹಾ ಮೂವರು ಕೇಶ್ಕಾಲ್ ನ ನಿವಾಸಿಗಳು. ಅನಿಲ್ ಸಿನ್ಹಾ ಅವರು ಕೇಶ್ಕಾಲ್ ನಗರ ಪಂಚಾಯತ್ ಕೌನ್ಸಿಲರ್ ಭೂಪೇಶ್ ಸಿನ್ಹಾ ಅವರ ಹಿರಿಯ ಸಹೋದರನಾಗಿದ್ದಾನೆ. ನಿನ್ನೆ ರಾತ್ರ ಎರಡೂ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಆಗಿತ್ತು.
ಘಟನೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಫರ್ಸ್‌ಗಾಂವ್ ಪೊಲೀಸರು ಸ್ಥಳಕ್ಕೆ ಧಾವಿಸಿ, ರಸ್ತೆಯಲ್ಲಿದ್ದ ವಾಹನಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.