ನವದೆಹಲಿ: ಕೊರೊನಾ ಲಾಕ್ಡೌನ್ನಿಂದಾಗಿ ರಿಚಾರ್ಜ್ ಮಾಡಿಸದ ಪ್ರಿಪೇಯ್ಡ್ ಗ್ರಾಹಕರಿಗೆ ಮಾನವೀಯ ದೃಷ್ಟಿಯಿಂದ ಒಳಬರುವ ಕರೆಗಳ ಸೇವೆಯನ್ನು ಬಿಎಸ್ಎನ್ಎಲ್ ಮೇ 5ರ ವರೆಗೆ ವಿಸ್ತರಿಸಿದೆ.
ಲಾಕ್ಡೌನ್ ಸಮಯದಲ್ಲಿ ಶೂನ್ಯ ಬ್ಯಾಲೆನ್ಸ್ ಒಳಗಾಗಿ ತಮ್ಮ ಸೇವೆಗಳ ಅವಧಿ ಮೀರಿದ್ದರೂ, ತನ್ನ ಚಂದಾದಾರರು ಎದುರಿಸುತ್ತಿರುವ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಬಿಎಸ್ಎನ್ ಮಾನವೀಯತೆಯ ದೃಷ್ಟಿಯಿಂದ ಚಂದಾದಾರರ ಮಾನ್ಯತೆಯನ್ನು ಮೇ 5ರ ವರೆಗೆ ವಿಸ್ತರಿಸಿದೆ. ಆದ್ದರಿಂದಲೇ ತನ್ನ ಒಳಬರುವ ಕರೆಗಳ ಸೇವೆಯನ್ನು ಗ್ರಾಹಕರು ಪಡೆಯುತ್ತಿದ್ದಾರೆ ಎಂದು ಸರ್ಕಾರದ ಟೆಲಿಕಾಂ ಸಂಸ್ಥೆ ತಿಳಿಸಿದೆ.