ಜುನಾಗಢ( ಗುಜರಾತ್) : ಭಾನುವಾರ ಸುರಿದ ಭಾರಿ ಮಳೆಯಿಂದ ಮಲಂಕಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕುಸಿದು ಬಿದ್ದಿದೆ. ಪರಿಣಾಮ ನಾಲ್ಕು ಕಾರುಗಳು ಜಲಾವೃತಗೊಂಡಿರುವ ಘಟನೆ ಗುಜರಾತಿನ ಜುನಾಗಢ ಬಳಿ ನಡೆದಿದೆ.
ಭಾರಿ ಮಳೆಗೆ ಕುಸಿದ ಮೇಲ್ಸೇತುವೆ... ನಾಲ್ಕು ಕಾರುಗಳು ಜಲಾವೃತ - ಜುನಾಗ
ಭಾರಿ ಮಳೆಯಿಂದಾಗಿ ಮೇಲ್ಸೇತುವೆ ಕುಸಿದು ನಾಲ್ಕು ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.
ಸೇತುವೆ ಕುಸಿತ
ಜುನಾಗಢ ಬಳಿಯ ಮಂಡೇರ್ದಾ-ಸಾಸನ್ ಮಾರ್ಗದಲ್ಲಿರುವ ಮಲಂಕಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನ ರಭಸಕ್ಕೆ ಕುಸಿದು ಬಿದ್ದಿದೆ. ಈ ಪರಿಣಾಮವಾಗಿ ಸೇತುವೆ ಮೇಲೆ ಸಂಚರಿಸುತ್ತಿದ್ದ ನಾಲ್ಕು ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದನ್ನು ಹೊರತುಪಡಿಸಿದರೆ ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಕಾರಿನಲ್ಲಿ ಪುಟ್ಟ ಮಕ್ಕಳು ವೃದ್ಧರು ಸೇರಿದಂತೆ ಅನೇಕ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಅದೃಷ್ಠವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎನ್ನಲಾಗಿದೆ.
Last Updated : Oct 7, 2019, 12:10 PM IST