ಕರ್ನಾಟಕ

karnataka

ETV Bharat / bharat

ಹೋಳಿ ಸಂಭ್ರಮಾಚರಣೆ ವೇಳೆ ಬಿಜೆಪಿ ಶಾಸಕನಿಗೆ ಗುಂಡೇಟು!

ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಹೋಳಿ ಹಬ್ಬ ಆಚರಣೆ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಗೆ ಕಾರಣವಾಗಿರುವ ಶಾಸಕನ ಭದ್ರತಾ ಅಧಿಕಾರಿಯನ್ನ ವಜಾಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ

By

Published : Mar 21, 2019, 11:48 PM IST

ಲಖಿಮ್ಪುರ್(ಯುಪಿ): ದೇಶಾದ್ಯಂತ ಇಂದು ಹೋಳಿ ಸಂಭ್ರಮಾಚರಣೆಯನ್ನ ಸಡಗರ-ಸಂಭ್ರಮದಿಂದ ಆರಚರಣೆ ಮಾಡಲಾಗುತ್ತಿದೆ. ಇದರ ಮಧ್ಯೆ ಉತ್ತರಪ್ರದೇಶದ ಲಖಿಮ್ಪುರ್​​ದಲ್ಲಿ ಅವಘಡವೊಂದು ಸಂಭವಿಸಿದೆ.

ಉತ್ತರಪ್ರದೇಶದ ಲಖಿಮ್ಪುರ್ ಕ್ಷೇತ್ರದ ಬಿಜೆಪಿ ಶಾಸಕ ಯೋಗೇಶ್​ ವರ್ಮಾ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಹೋಳಿ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ ಅವರ ಕಾಲಿಗೆ ಬುಲೆಟ್​ ಬಿದ್ದಿದೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಘಟನೆಗೆ ಕಾರಣವಾಗಿರುವ ಭದ್ರತಾ ಅಧಿಕಾರಿಯನ್ನ ವಜಾಗೊಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ABOUT THE AUTHOR

...view details