ಮುಂಬೈ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದ ಏಕೈಕ ಪಕ್ಷವಾಗಿ ಹೊರಹೊಮ್ಮಬಹುದು. ಆದರೆ ಮೋದಿ ಮತ್ತೆ ಪ್ರಧಾನಿಯಾಗುವುದು ಡೌಟು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಬಿಜೆಪಿಯು ಲೋಕಸಮರದಲ್ಲಿ ಬಹುಮತ ಸಾಧಿಸಬಹುದು. ಆದರೆ ಸರ್ಕಾರ ರಚನೆಗೆ ಮೈತ್ರಿ ಅನಿವಾರ್ಯವಾಗುತ್ತೆ. ಗಮನಾರ್ಹವೆಂದರೆ, ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗ್ತಾರೆ ಎಂದು ಹೇಳಲಾಗದು ಎಂದು ಹೇಳಿದ್ದಾರೆ.
ಸದ್ಯ ಮಹಾಘಟಬಂಧನ ರಚನೆಯಲ್ಲಿ ನಿರತರಾಗಿರುವ ಪವಾರ್, ಇದೇ 14 ಹಾಗೂ 15ರಂದು ನವದೆಹಲಿಯಲ್ಲಿ ವಿವಿಧ ಸ್ಥಳೀಯ ಪಕ್ಷಗಳನ್ನು ಭೇಟಿ ಮಾಡಲಿದ್ದಾರೆ. ಈಗಾಗಲೆ ಎನ್ಸಿಪಿಗೆ ಬೆಂಬಲ ಘೋಷಿಸಿರುವ ಪಿಡಬ್ಲುಪಿಗೆ ಧನ್ಯವಾದ ಹೇಳಿದರು. ಸ್ವಾಭಿಮಾನಿ ಶಟ್ಕಾರಿ ಸಂಘಟನ್ನೊಂದಿಗೆ ಸೀಟು ಹಂಚಿಕೆ ಬಗ್ಗೆ ಮಾತನಾಡುವುದಾಗಿ ಸಹ ಹೇಳಿದರು.
ಸೋಮವಾರ ತಾವು ಲೋಕಸಭೆ ಚುನವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ತಮ್ಮ ಕುಟುಂಬದ ಇಬ್ಬರು ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.