ಕರ್ನಾಟಕ

karnataka

ETV Bharat / bharat

ಆತಂಕದಲ್ಲಿ ರಾಜ್ಯ ಮೈತ್ರಿ ಸರ್ಕಾರ... ಮೋದಿ ವಿರುದ್ಧ ಸುರ್ಜೇವಾಲಾ​​ ವಾಗ್ದಾಳಿ - ಸುರ್ಜೇವಾಲ್​

ಮೋದಿ ನೇತೃತ್ವದಲ್ಲೇ ಕುದುವೆ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಪ್ರಜಾಪ್ರಭುತ್ವ ವಿಫಲಗೊಳಿಸುವ ಅವರ ಹುನ್ನಾರ ಯಶಸ್ವಿಯಾಗುವುದಿಲ್ಲ ಎಂದು ಸುರ್ಜೇವಾಲಾ​ ಹೇಳಿದ್ದಾರೆ.

ಸುರ್ಜೇವಾಲ್​​

By

Published : Jul 6, 2019, 8:18 PM IST

Updated : Jul 6, 2019, 8:44 PM IST

ನವದೆಹಲಿ:ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಶಾಸಕರ ರಾಜೀನಾಮೆ ಪರ್ವ ಮುಂದುವರಿಯುತ್ತಿದ್ದಂತೆ ದೆಹಲಿಯಲ್ಲಿ ಪ್ರಮುಖರು ಸಭೆ ನಡೆಸಿದರು. ಈ ವೇಳೆ ಮಾತನಾಡಿರುವ ಕಾಂಗ್ರೆಸ್​ ವಕ್ತಾರ ರಣದೀಪ್​​ ಸುರ್ಜೇವಾಲಾ,​ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

ಸುರ್ಜೇವಾಲ್​​

ಬಿಜೆಪಿ ಕುದುರೆ ವ್ಯಾಪಾರ ಇದೀಗ ಜೋರಾಗಿದ್ದು, ಚುನಾಯಿತ ಸರ್ಕಾರ ಉರುಳಿಸಲು ಅದು ಸರ್ಕಸ್​ ನಡೆಸುತ್ತಿದೆ. ಇದರ ಹಿಂದೆ ಮೋದಿ ಕೈವಾಡವಿದ್ದು, ಅವರೇ ಇದಕ್ಕೆ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವ ವಿಫಲಗೊಳಿಸುವ ಬಿಜೆಪಿ ಪ್ರಯತ್ನ ಯಾವುದೇ ಕಾರಣಕ್ಕೂ ಫಲ ಕೊಡಲ್ಲ ಎಂದಿರುವ ಸುರ್ಜೇವಾಲಾ​, ಮೋದಿ ಆಯಾರಾಂ ಗಯಾರಾಂ ಮಾಡುತ್ತಿದ್ದಾರೆ. ದುಡ್ಡು ಕೊಟ್ಟು ಶಾಸಕರನ್ನ ಖರೀದಿ ಮಾಡುವ ಬಿಜೆಪಿ ಅರುಣಾಚಲಪ್ರದೇಶ, ತ್ರಿಪುರಾ ಹಾಗೂ ಮಿಜೋರಾಂದಲ್ಲೂ ಇದೇ ಕೆಲಸ ಮಾಡ್ತಿದೆ ಎಂದು ದೂರಿದ್ದಾರೆ.

ರಾಜ್ಯ ಸರ್ಕಾರದ 14 ಶಾಸಕರು ರಾಜೀನಾಮೆ ನೀಡುತ್ತಿದ್ದಂತೆ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದ್ದು, ಹೈಕಮಾಂಡ್​ ಕೂಡ ಇದೇ ವಿಷಯವಾಗಿ ಇಂದು ಸಭೆ ನಡೆಸಿತು.

Last Updated : Jul 6, 2019, 8:44 PM IST

ABOUT THE AUTHOR

...view details