ಕರ್ನಾಟಕ

karnataka

ETV Bharat / bharat

ಬಿಹಾರದಲ್ಲಿ ನಿತೀಶ್​ ಕುಮಾರ್​ ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ: ಪಿಎಂ ಮೋದಿ

ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಹಾರದಲ್ಲಿ ಮೂರನೇ ಬಾರಿ ಮತಬೇಟೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ನಾಲ್ಕು ಕಡೆ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಾಪ್ರಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ನಿತೀಶ್​ ಕುಮಾರ್​ ಮತ್ತೊಮ್ಮೆ ಸರ್ಕಾರ ರಚನೆಗೆ ಸಜ್ಜಾಗಿದ್ದಾರೆ ಎಂದಿದ್ದಾರೆ.

By

Published : Nov 1, 2020, 1:18 PM IST

PM Modi
ಪಿಎಂ ಮೋದಿ

ಪಾಟ್ನಾ:ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡ ರಂಗೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.

ಚಾಪ್ರಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದ ಮತದಾನದ ಬಳಿಕ ನಿತೀಶ್ ಕುಮಾರ್ ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.

ಬಿಹಾರದಲ್ಲಿಂದು 'ಡಬಲ್ ಎಂಜಿನ್ ಸರ್ಕಾರ'ವಿದೆ. ಮತ್ತೊಂದೆಡೆ, ಇಬ್ಬರು 'ಯುವರಾಜರು' ಇದ್ದಾರೆ ಎಂದು ಚಿರಾಗ್​ ಪಾಸ್ವಾನ್​ ಹಾಗೂ ತೇಜಸ್ವಿ ಯಾದವ್​​ರ ಕುರಿತು ಹೇಳಿದ ಮೋದಿ, ಅವರಲ್ಲಿ ಒಬ್ಬರು 'ಕಾಡಿನ ರಾಜ' (ಜಂಗಲ್ ರಾಜ್) ಎಂದು ತೇಜಸ್ವಿ ಯಾದವ್​​ಗೆ ಮೋದಿ ಟಾಂಗ್​ ನೀಡಿದರು.

ರಾಜ್ಯದಲ್ಲಿ 243 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್​ 28 ರಂದು ಮೊದಲ ಹಂತದ ಮತದಾನ ಮುಗಿದಿದ್ದು, ನವೆಂಬರ್​ 3 ಮತ್ತು 7 ರಂದು ಎರಡನೇ ಹಾಗೂ ಮೂರನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ನವೆಂಬರ್​ 10ರಂದು ಫಲಿತಾಂಶ ಹೊರಬೀಳಲಿದೆ.

ಅಕ್ಟೋಬರ್ 23 ಮತ್ತು 28 ರಂದು ಪ್ರಧಾನಿ ಮೋದಿ ಎರಡು ಬಾರಿ ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಇದೀಗ ಮೂರನೇ ಬಾರಿ ಮತಬೇಟೆ ಆರಂಭಿಸಿದ್ದು, ನಾಲ್ಕು ಕಡೆ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ABOUT THE AUTHOR

...view details