ಕರ್ನಾಟಕ

karnataka

By

Published : Oct 18, 2020, 2:20 PM IST

ETV Bharat / bharat

ಮಧ್ಯಪ್ರದೇಶ ಬೈ ಎಲೆಕ್ಷನ್​​​​ನಲ್ಲಿ ದಲಿತ ಮತಗಳೇ ನಿರ್ಣಾಯಕ: ವಿಶ್ಲೇಷಕರು ಹೇಳೋದೇನು..?

ಮಧ್ಯಪ್ರದೇಶ ಉಪ ಚುನಾವಣಾ ಸಮರ ಆರಂಭವಾಗಿದ್ದು, ದಲಿತ ಮತಗಳು ನಿರ್ಣಾಯಕ ಎಂಬ ಮಾತುಗಳು ಕೇಳಿ ಬರುತ್ತಿವೆ.

bsp
ಬಿಎಸ್​ಪಿ

ಭೋಪಾಲ್ (ಮಧ್ಯಪ್ರದೇಶ):ಸುಮಾರು 28 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಜಿದ್ದಾಜಿದ್ದಿಗೆ ಮಧ್ಯಪ್ರದೇಶ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ವಿಶ್ಲೇಷಣೆಗಳು ನಡೆದಿದ್ದು, ದಲಿತ ಸಮುದಾಯ ಬಾರಿಯ ಗೇಮ್ ಚೇಂಜರ್ ಆಗಿರಲಿದೆ.

ಅದರಲ್ಲೂ ಯಾವ ಪಕ್ಷ ಪರಿಶಿಷ್ಟ ಜಾತಿಯ ಮತಗಳನ್ನು ಹೆಚ್ಚಾಗಿ ಪಡೆಯಲಿದೆಯೋ ಅದೇ ಪಕ್ಷ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ. 28 ಕ್ಷೇತ್ರಗಳಲ್ಲಿ ಸುಮಾರು 26 ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಮತಗಳು ನಿರ್ಣಾಯಕವಾಗಲಿದೆ.

ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ (ಬಿಎಸ್​ಪಿ) ಮಧ್ಯಪ್ರದೇಶದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಎಲ್ಲ 28 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಬಿಎಸ್​ಪಿಯ ವರ್ಚಸ್ಸು ದಿನೇ ದಿನೆ ಕಡಿಮೆಯಾಗುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಬಿಎಸ್​ಪಿ ಹಾಗೂ ಪರಿಶಿಷ್ಟ ಜಾತಿಗಳ ಪಾತ್ರ

ಗ್ವಾಲಿಯಾರ್ ಹಾಗೂ ಚಂಬಲ್ ಪ್ರಾಂತ್ಯದಲ್ಲಿ ಪರಿಶಿಷ್ಟ ಜಾತಿಯ ಜನರು ಬಿಎಸ್​ಪಿ ಕಡೆ ಒಲವು ತೋರಿದ್ದಾರೆ. ಬಿಎಸ್​ಪಿ ಹಲವು ಬಾರಿ ಈ ಪ್ರದೇಶಗಳಲ್ಲಿ ಗೆಲುವು ಸಾಧಿಸಿದೆ. ಕೊನೆಯ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಚಂಬಲ್ ಪ್ರದೇಶದಲ್ಲಿಯೂ ಕೂಡಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಉಳಿದ ಪಕ್ಷಗಳು ಈ ಪ್ರಾಂತ್ಯದಲ್ಲಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ.

ಪರಿಶಿಷ್ಟ ಜಾತಿಗಳ ಪ್ರಭಾವ

ಕರೇರಾ, ಭಾಂದೇರ್, ಅಂಬಾ, ಗೋಹಾಡ್, ಅಶೋಕ್ ನಗರ್ ಸನ್ಹಾರ್, ಸಾಂಚಿ, ಅಗರ್ ವಿಧಾನ ಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಗ್ವಾಲಿಯಾರ್ ಹಾಗೂ ಚಂಬಲ್ ಪ್ರಾಂತ್ಯದ 16 ಕ್ಷೇತ್ರಗಳಲ್ಲಿ ಬಿಎಸ್​ಪಿ ತನ್ನ ಪ್ರಭಾವ ಬೀರುವ ಸಾಧ್ಯತೆಯಿದೆ.

ಬಿಎಸ್​ಪಿ ವರ್ಚಸ್ಸು ಕುಗ್ಗಿದೆ: ಕಾಂಗ್ರೆಸ್

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಹಾಗೂ ಕಾಂಗ್ರೆಸ್ ಪರಸ್ಪರ ಸ್ಪರ್ಧೆ ಮಾಡಿದ್ದು, ಈಗ ಬಿಎಸ್​ಪಿಯ ವರ್ಚಸ್ಸು ತಗ್ಗಿದೆ ಎಂದು ಕಾಂಗ್ರೆಸ್ ನಾಯಕ ಭೂಪೇಂದ್ರ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮೊದಲು ಬಿಎಸ್​ಪಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದು ಈಗ ಸ್ಪರ್ಧಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ವಿಶ್ಲೇಷಕರು ಉಪಚುನಾವಣೆ ಬಗ್ಗೆ ಹೇಳೋದೇನು..?

ಈ ಮೊದಲು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಿದ್ದ ಬಿಎಸ್​ಪಿ ಈಗ ಸ್ಪರ್ಧೆಗೆ ಮುಂದಾಗಿದೆ. ದಲಿತರ ಮತಗಳೂ ಹೆಚ್ಚಿದ್ದರೂ ಕೂಡಾ ಇಲ್ಲಿ ನಿಜವಾದ ಸ್ಪರ್ಧಿಗಳು ಬಿಜೆಪಿ ಹಾಗೂ ಕಾಂಗ್ರೆಸ್ ಎಂದು ರಾಜಕೀಯ ವಿಶ್ಲೇಷಕ ದೀಪಕ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details