ಬಲೂಚಿಸ್ತಾನ್: ಸ್ವತಂತ್ರ್ಯೋತ್ಸವ ದಿನದ ಅಂಗವಾಗಿ ಭಾರತದ ಸಹೋದರ, ಸಹೋದರಿಯರಿಗೆ ನಾವು ಶುಭಾಶಯ ಕೋರುತ್ತಿದ್ದು, ಇದೇ ಸಂದರ್ಭದಲ್ಲಿ ಪಾಕಿಸ್ತಾನದಿಂದ ಬಲೂಚಿಸ್ತಾನ ಸ್ವತಂತ್ರಗೊಳಿಸುವಂತೆ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಅಲ್ಲಿನ ಜನರು ಪ್ರತಿಭಟನೆ ನಡೆಸಿದರು.
ಪಾಕ್ನಿಂದ ಬಲೂಚಿಸ್ತಾನ ಮುಕ್ತಗೊಳಿಸಿ... ಭಾರತದ ಮುಂದೆ ಅಂಗಲಾಚಿದ ಬಲೂಚ್ ನಿವಾಸಿಗಳು - ಸ್ವಾತಂತ್ರ್ಯೋತ್ಸವ ದಿನ
ಪಾಕ್ನಿಂದ ಆಕ್ರಮಣಕ್ಕೊಳಗಾಗಿರುವ ಬಲೂಚಿಸ್ತಾನದಲ್ಲಿ ಇದೀಗ ಪ್ರತಿಭಟನೆ ಮತ್ತಷ್ಟು ಉಗ್ರಗೊಂಡಿದ್ದು, ಭಾರತದ ಸ್ವಾತಂತ್ರ್ಯೋತ್ಸವ ದಿನವೇ ಪ್ರೊಟೆಸ್ಟ್ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಳೆದ 70 ವರ್ಷಗಳಲ್ಲಿ ಭಾರತ ಇಡೀ ವಿಶ್ವವೇ ಹೆಮ್ಮೆ ಪಡುವಂತಹ ಕೆಲಸ ಮಾಡಿಕೊಂಡು ಬರುತ್ತಿದೆ. ಆದರೆ ಪಾಕ್ ಈ ರೀತಿಯಾಗಿ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ನೀವೂ ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನ ಪ್ರಸ್ತಾಪ ಮಾಡಿ ಎಂದು ಆಗ್ರಹಿಸಿದ್ದಾರೆ.
1948ರಲ್ಲಿ ಪಾಕ್ನಿಂದ ಆಕ್ರಮಣಕ್ಕೊಳಗಾಗಿರುವ ಬಲೂಚಿಸ್ತಾನ, ಈಗಾಗಲೇ ಅನೇಕ ಸಲ ಪಾಕ್ ವಿರುದ್ಧ ಪ್ರತಿಭಟಿಸಿದ್ದು, ತಮಗೆ ಸ್ವತಂತ್ರ ಬಲೂಚಿಸ್ತಾನ ಬೇಕು ಎಂಬ ಬೇಡಿಕೆ ಇಟ್ಟಿದೆ. ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಾಕಿಸ್ತಾನದ ಯೋಧರು, ಇಲ್ಲಿನ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದಂತಹ ಅಮಾನವೀಯ ಕೃತ್ಯವೆಸಗುತ್ತಿದ್ದಾರೆ ಎಂಬ ಗಂಭೀರ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿದೆ.ಇಂದು ಭಾರತದಲ್ಲಿ 73ನೇ ಸ್ವತಂತ್ರ ಸಂಭ್ರಮದಲ್ಲಿದ್ದು, ಇದೇ ವೇಳೆ ಬಲೂಚಿಸ್ತಾನ ತನ್ನ ಅಳಲು ಭಾರತದ ಮುಂದೆ ಹೇಳಿಕೊಂಡಿದೆ.