ಕರ್ನಾಟಕ

karnataka

ETV Bharat / bharat

ಶುಕ್ರವಾರದ ಭವಿಷ್ಯ : ಈ ರಾಶಿಯವರಿಗೆ ಹಣಕಾಸಿನ ವ್ಯವಹಾರಗಳಲ್ಲಿ ಅಡ್ಡಿ ಸಾಧ್ಯತೆ - ಮಿಥುನ

ಮೇಷ: ಇಂದು ಅಲೆಯ ಹರಿವಿನೊಂದಿಗೆ ಮುನ್ನಡೆಯಿರಿ. ಇದು ನಿಮ್ಮ ಬಾಂಧವ್ಯಗಳಿಗೆ ಪೂರಕವಾದ ಸಲಹೆ. ಸಾಮಾನ್ಯ ನಿಯಮದಂತೆ ನೀವು ನಿಶ್ಚಯಾತ್ಮಕವಾಗಿರುತ್ತೀರಿ. ಈ ದಿನ ಉದಾರವಾಗಿರುವ ಮತ್ತು ನಿಮ್ಮ ಪ್ರೀತಿಪಾತ್ರರ ಬಯಕೆಗಳನ್ನು ಒಪ್ಪಿಕೊಳ್ಳುವ ದಿನ. ನೀವು ಆತ/ಆಕೆಗೆ ಪ್ರಪೋಸ್ ಮಾಡುವ ಸಾಧ್ಯತೆ ಇದೆ.

ಭವಿಷ್ಯ

By

Published : Jul 26, 2019, 5:35 AM IST

ವೃಷಭ:ನಿಮಗೆ ಇಂದು ಕೊಂಚ ಆಕ್ರಮಣಶೀಲ ಮತ್ತು ಪ್ರಭಾವಿಯಾಗಿರುವ ಅಗತ್ಯವಿದೆ. ಆದರೆ, ನಿಮ್ಮ ಆಕ್ರಮಣಶೀಲತೆಯನ್ನು ಸತತವಾಗಿ ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಭೇಟಿಯಾಗುವ ಜನರೊಂದಿಗೆ ಸೌಹಾರ್ದತೆಯಿಂದಿರಿ. ಇಂದು ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳದೇ ಇರಲು ಪ್ರಯತ್ನಿಸಿ. ಸಾಮಾನ್ಯ ದಿನದಂತೆ ಕಾಲ ಕಳೆಯಿರಿ.

ಮಿಥುನ:ನೀವು ಮಾಡುವ ಪ್ರತಿ ಕೆಲಸದಲ್ಲೂ ಪರಿಪೂರ್ಣತೆ ನಿರೀಕ್ಷೆ ಮಾಡುತ್ತೀರಿ ಮತ್ತು ಈ ತತ್ವವನ್ನು ನೀವು ಅಳವಡಿಸಿಕೊಂಡಿದ್ದೀರಿ ಕೂಡಾ. ನೀವು ವ್ಯಯಿಸುವ ಶಕ್ತಿ ಕುರಿತು ಧನಾತ್ಮಕವಾಗಿರುವುದು ಮತ್ತು ಸರಿಯಾದ ಜೀವನದ ಆಯ್ಕೆಗಳನ್ನು ಮಾಡುವಲ್ಲಿ ಗಮನ ನೀಡುವುದು.

ಕರ್ಕಾಟಕ: ನಿಮ್ಮ ದಾರಿಯಲ್ಲಿ ಹೊಸ ಜವಾಬ್ದಾರಿಗಳು ಬಂದಂತೆ, ನೀವು ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ ಮತ್ತು ಅದರಿಂದ ಸುಸ್ತಾದ ಭಾವನೆ ಹೊಂದುತ್ತೀರಿ. ನೀವು ಮುನ್ನಡೆದಂತೆ ಒತ್ತಡವೂ ಉಂಟಾಗುವ ಸಾಧ್ಯತೆ ಇದೆ.

ಸಿಂಹ:ಇಂದು ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನಿಮ್ಮ ಅಹ‍ಂ ನಿಮ್ಮನ್ನು ತಡೆಯದಂತೆ ನೋಡಿಕೊಳ್ಳಿ. ಇಂದು ಪ್ರಣಯರೀತ್ಯಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಉತ್ತಮ ದಿನದಂತೆ ಕಾಣುತ್ತಿದೆ. ಆದರೆ, ನಿಮ್ಮ ಅಹಂ ಪಕ್ಕಕ್ಕೆ ಇರಿಸಿದ ನಂತರ ಮಾತ್ರ ಮುನ್ನಡೆಯಿರಿ.

ಕನ್ಯಾ:ಹಣಕಾಸಿನ ವ್ಯವಹಾರಗಳಲ್ಲಿ ಅಡ್ಡಿ ಎದುರಿಸುವ ಸಾಧ್ಯತೆ. ನಿಮ್ಮ ಕಾನೂನು ಕರ್ತವ್ಯಗಳಲ್ಲದೆ ಮತ್ತು ಹೊಸ ಯೋಜನೆಗಳ ಬಗ್ಗೆ ಹೆಚ್ಚುವರಿ ಗಮನ ನೀಡಿ.

ತುಲಾ:ನಿಮ್ಮ ಮಕ್ಕಳು ಸಾಧನೆಗೆ ಹೆಮ್ಮೆಯ ಪಡುತ್ತೀರಿ. ನೀವು ಹಣಕಾಸಿನ ಅನುಕೂಲವನ್ನು ವೇತನ ಹೆಚ್ಚಳ ಅಥವಾ ಪಿತ್ರಾರ್ಜಿತವಾಗಿ ಪಡೆಯುತ್ತೀರಿ. ರಿಯಲ್ ಎಸ್ಟೇಟ್ ಅಥವಾ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಗಮನಾರ್ಹ ಗಳಿಕೆ ಪಡೆಯುತ್ತೀರಿ.

ವೃಶ್ಚಿಕ: ಇಂದು, ನೀವು ಎಲ್ಲ ಸಮಯದಲ್ಲೂ ಜಾಗರೂಕರಾಗಿರಬೇಕು. ನೀವು ಹರಕೆಯ ಕುರಿಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಮತ್ತು ಯಾರಿಗೋ ಉದ್ದೇಶಿಸಿದ ಏಟು ನಿಮಗೆ ಬೀಳಬಹುದು. ಸ್ವಲ್ಪ ಎಚ್ಚರಿಕೆಯ ವಹಿಸಿದರೆ ನಿಮಗೆ ಮುಜುಗರ ತರುವ ಸನ್ನಿವೇಶದಿಂದ ಪಾರಾಗಬಹುದು. ಆದರೆ, ನಿಮ್ಮ ದಾರಿಯಲ್ಲಿ ಬರುವ ಪ್ರತಿಯೊಂದರಿಂದ ಸಾಕಷ್ಟು ಕಲಿಯುತ್ತೀರಿ.

ಧನು: ನಿಮಗೆ ಅತ್ಯಂತ ಆಸಕ್ತಿಯುಳ್ಳ ಒಂದನ್ನು ಅನುಸರಿಸುತ್ತಿರುವುದರಿಂದ ನಿಮ್ಮ ದಿನ ಸಂಪೂರ್ಣ ಉತ್ಸಾಹ ಮತ್ತು ಭರವಸೆಯಿಂದ ಕೂಡಿರುತ್ತದೆ. ನೀವು ಯಾವುದೇ ಕಾರ್ಯಕ್ರಮದ ಕೇಂದ್ರಬಿಂದುವಾದರೆ ಆಶ್ಚರ್ಯಪಡಬೇಡಿ. ಅದಲ್ಲದೆ, ನಿಮ್ಮ ವ್ಯಾಪಾರಕ್ಕಾಗಿ ನೀವು ದೂರದ ಪ್ರಯಾಣಗಳನ್ನು ಮಾಡುವುದನ್ನು ನಿಮ್ಮ ತಾರೆಗಳು ಸೂಚಿಸುತ್ತಿರುವುದರಿಂದ ನೀವು ಬ್ಯಾಗ್​ಗಳನ್ನು ಸಜ್ಜುಗೊಳಿಸಲು ಪ್ರಾರಂಭಿಸಲು ಬಯಸಬಹುದು.

ಮಕರ: ನಿಮ್ಮ ಕೈಗಳು ಅಪಾರ ಯೋಜನೆಗಳು ಮತ್ತು ಕೆಲಸಗಳಿಂದ ತುಂಬಿದೆ. ಅವುಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಪೂರ್ಣಗೊಳಿಸಿ ಮತ್ತು ಉಳಿದ ದಿನವನ್ನು ನಿಮ್ಮ ಮನಸ್ಸಿಗೆ ಉತ್ಸಾಹ ತುಂಬುವಲ್ಲಿ ಕಳೆಯಿರಿ. ಜೀವನದ ಎಲ್ಲ ವಲಯಗಳ ಜನರೊಂದಿಗೆ ಮಾತುಕತೆ ನಿಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ. ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ, ನಿಮಗೆ ಇಷ್ಟಬಂದಂತೆ ಕಾಲ ಕಳೆಯಲು ಮುಕ್ತರಾಗಿರುತ್ತೀರಿ.

ಕುಂಭ: ವಿಷಯಗಳು ನಿಂತ ನೀರಾಗಿವೆ, ಆದರೆ ನಿಮ್ಮ ಸ್ಫೂರ್ತಿಯನ್ನು ಅಲ್ಲಾಡಿಸಲು ವಿಫಲವಾಗಿವೆ. ನಿಧಾನ ಮತ್ತು ಸ್ಥಿರವಾದ ಪ್ರಯತ್ನದಿಂದ ಖಂಡಿತಾ ಗೆಲುವು ಸಾಧ್ಯ, ಮತ್ತು ನೀವು ಅದನ್ನು ಚೆನ್ನಾಗಿ ಗ್ರಹಿಸಿದ್ದೀರಿ. ನಿಮ್ಮ ದಾರಿಯಲ್ಲಿ ದೊರೆಯುವ ಅವಕಾಶಗಳನ್ನು ಹಿಡಿದುಕೊಳ್ಳಲು ಶಕ್ತರಾಗುತ್ತೀರಿ ಮತ್ತು ನಿಮ್ಮ ದಾರಿಯಲ್ಲಿ ಮುನ್ನಡೆಯುತ್ತೀರಿ. ಆರ್ಥಿಕವಾಗಿ ನೀವು ಸ್ಥಿರವಾಗಿದ್ದೀರಿ.

ಮೀನ:ನಿಮ್ಮ ತಾಳ್ಮೆ ಮತ್ತು ಸಾಮರ್ಥ್ಯಗಳು ಇಂದು ಪರೀಕ್ಷೆಗೆ ಒಳಪಡುತ್ತವೆ ಮತ್ತು ನೀವು ಕೈಗೊಳ್ಳುವ ಪ್ರತಿ ಕೆಲಸದಲ್ಲಿಯೂ ನಿಮ್ಮನ್ನು ಪರೀಕ್ಷೆಗೆ ಒಡ್ಡುತ್ತವೆ. ಸರಳ ಕೆಲಸಗಳು ಮತ್ತು ಸಾಮಾನ್ಯ ಗುರಿಗಳನ್ನು ಸಾಧಿಸಲೂ ಕಷ್ಟವೆನಿಸುತ್ತವೆ ಮತ್ತು ಪೂರ್ಣಗೊಳಿಸಲು ಗಮನಾರ್ಹ ಪ್ರಮಾಣದ ಪ್ರಯತ್ನ ಅಗತ್ಯವಾಗುತ್ತದೆ, ಇದಕ್ಕೆ ಗ್ರಹಗಳು ಅನುಕೂಲಕರವಾಗಿಲ್ಲದಿರುವುದು ಕಾರಣ.

ABOUT THE AUTHOR

...view details