ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ನಿಲ್ಲದ ವರುಣನ ಅಬ್ಬರ: ಬರಾಕ್ ನದಿಯಲ್ಲಿ ನೀರಿನ ಮಟ್ಟ ಏರಿಕೆ

ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿರುವುದರಿಂದ ಈಗಾಗಲೇ ಬೆಳೆಗಳು ಹಾನಿಯಾಗಿ ಮಣ್ಣು ಕುಸಿತಕ್ಕೆ ಕಾರಣವಾಗಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಇದೀಗ ಮತ್ತಷ್ಟು ಮಳೆಯಿಂದಾಗಿ ಬರಾಕ್​ ನದಿಯ ನೀರಿನ ಮಟ್ಟವೂ ಅಧಿಕವಾಗುತ್ತಿದೆ

By

Published : Jul 20, 2020, 11:27 AM IST

barakh river
barakh river

ಗುವಾಹಟಿ (ಅಸ್ಸೋಂ): ಬ್ರಹ್ಮಪುತ್ರ ಸೇರಿದಂತೆ ಹೆಚ್ಚಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅಸ್ಸೋಂನಲ್ಲಿ ಪ್ರವಾಹ ಉಂಟಾಗಿದ್ದು, ಇದೀಗ ಕ್ಯಾಚರ್ ಜಿಲ್ಲೆಯ ಮೂಲಕ ಹರಿಯುವ ಬರಾಕ್ ನದಿಯ ನೀರಿನ ಮಟ್ಟವೂ ಹೆಚ್ಚುತ್ತಿದೆ.

ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿರುವುದರಿಂದ ಈಗಾಗಲೇ ಬೆಳೆಗಳು ಹಾನಿಯಾಗಿ ಮಣ್ಣು ಕುಸಿತಕ್ಕೆ ಕಾರಣವಾಗಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ.

ಬರಾಕ್ ನದಿಯ ನೀರಿನ ಮಟ್ಟ ನಿಯಂತ್ರಣದಲ್ಲಿತ್ತು, ಆದರೆ ಈಗ ಮತ್ತಷ್ಟು ಮಳೆಯಿಂದಾಗಿ ಬರಾಕ್​ನ ನೀರಿನ ಮಟ್ಟವೂ ಅಧಿಕವಾಗುತ್ತಿದೆ ಎಂದು ರಾಜ್ಯ ಮತ್ತು ಕೇಂದ್ರ ಜಲಸಂಪನ್ಮೂಲ ಇಲಾಖೆ ತಿಳಿಸಿದೆ.

ಕೇಂದ್ರ ಜಲ ಆಯೋಗದ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಮಳೆ ಹೆಚ್ಚಾದರೆ ಈ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಬಹುದು. ಪ್ರಸ್ತುತ, ನೀರು ಅಪಾಯದ ಮಟ್ಟಕ್ಕಿಂತ ಕೆಳಗಿದೆ" ಎಂದು ಹೇಳಿದರು.

ABOUT THE AUTHOR

...view details