ವಿಜಯವಾಡ: ಮದ್ಯಪ್ರಿಯರಿಗೇನೋ ಸರ್ಕಾರ ಶುಭಸುದ್ದಿ ನೀಡಿದೆ. ಆದರೆ, ಜನರ ಆರೋಗ್ಯ ದೃಷ್ಟಿಯಿಂದ ಕೆಲವು ಷರತ್ತು ಹಾಕಲು ಆಂಧ್ರಪ್ರದೇಶ ಸರ್ಕಾರ ನಿರ್ಣಯವೊಂದನ್ನು ಕೈಗೊಂಡಿದೆ.
ಬಾರ್ ಏನೋ ಓಪನ್ ಆಗಿವೆ...ಆದರೆ, ಕುಡುಕರು ಮದ್ಯ ನಿಷೇಧ ತೆರಿಗೆಯನ್ನೂ ನೀಡಬೇಕು! - ವಿಜಯವಾಡ
ಜನರು ಮದ್ಯ ಸೇವಿಸುವುದನ್ನು ಮಿತಗೊಳಿಸುವ ಸಲುವಾಗಿ ಆಂಧ್ರಪ್ರದೇಶ ಸರ್ಕಾರವು ಮದ್ಯದ ಮೇಲೆ ನಿಷೇಧ ತೆರಿಗೆ ವಿಧಿಸಲು ಮುಂದಾಗಿದೆ.
ಇಂದಿನಿಂದ ಆಂಧ್ರಪ್ರದೇಶದಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಆದರೆ, ಈ ಮದ್ಯಕ್ಕೆ ನಿಷೇಧ ತೆರಿಗೆ ಹೇರಲು ಸರ್ಕಾರ ಮುಂದಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ರಜತ್ ಭಾರ್ಗವ ತಿಳಿಸಿದ್ದಾರೆ.
ನಾವು ರಾಜ್ಯದ ಆದಾಯಕ್ಕೆ ಸಂಬಂಧಿಸಿಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಕಾಳಜಿ ವಹಿಸಿ ನಿಷೇಧ ತೆರಿಗೆ ವಿಧಿಸುತ್ತಿದ್ದೇವೆ. ಈ ತೆರಿಗೆ ಮೊತ್ತವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಭಾರ್ಗವ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 3,500 ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತದೆ. ಇನ್ನು ಮಾಲ್ಗಳಲ್ಲಿನ ಮದ್ಯದ ಅಂಗಡಿ ತೆರೆಯಲು ಅವಕಾಶ ಇರುವುದಿಲ್ಲ. ರೆಡ್ಝೋನ್ ಹೊತರುಪಡಿಸಿ ಉಳಿದೆಲ್ಲಾ ವಲಯಗಳಲ್ಲಿ ಮದ್ಯದ ಅಂಗಡಿ ತೆರೆಯಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.