ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಮಹೀಂದ್ರಾ ಗ್ರೂಪ್‌ನ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಮುಂದಾಗಿದ್ದು, ಅವರ ಒಡೆತನದ ರೆಸಾರ್ಟ್ಗಳನ್ನು ಸೋಂಕಿತರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲು ಒದಗಿಸುವುದಾಗಿ ತಿಳಿಸಿದ್ದಾರೆ.
ಕೊವಿಡ್-19 ಚಿಕಿತ್ಸಾ ಕೇಂದ್ರಗಳಿಗಾಗಿ ರೆಸಾರ್ಟ್ಗಳನ್ನು ನೀಡಲು ಮುಂದಾದ ಆನಂದ್ ಮಹೀಂದ್ರಾ - ರೆಸಾರ್ಟ್
ಕೊವಿಡ್-19 ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಾಗಿ ಬಳಸಿಕೊಳ್ಳಲು ನಮ್ಮ ರೆಸಾರ್ಟ್ಗಳನ್ನು ನೀಡಲು ಸಿದ್ಧವಿದ್ದೇವೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಭಾರತ ಕೊವಿಡ್-19ನ 3ನೇ ಹಂತದಲ್ಲಿದ್ದು, ಇದು ವೈದ್ಯಕೀಯ ಮೂಲಸೌಕರ್ಯಗಳಮೇಲೆ ಭಾರಿ ಒತ್ತಡ ಉಂಟುಮಾಡುತ್ತದೆ. ಬೃಹತ್ ಪ್ರಮಾಣದಲ್ಲಿ ತಾತ್ಕಾಲಿಕ ಆಸ್ಪತ್ರೆಗಳು ಮತ್ತು ವೆಂಟಿಲೇಟರ್‌ಗಳ ಅಗತ್ಯವಿದೆ. ಹೀಗಾಗಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಾಗಿ ಬಳಸಿಕೊಳ್ಳಲು ನಮ್ಮ ರೆಸಾರ್ಟ್ಗಳನ್ನು ನೀಡಲು ಸಿದ್ಧವಿದ್ದೇವೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಮಹೀಂದ್ರಾ ಗ್ರೂಪ್ ಕಡೆಯಿಂದ ವೆಂಟಿಲೇಟರ್‌ಗಳ ತಯಾರಿಕೆ ಕುರಿತು ಸಹ ಗಮನ ಹರಿಸುವುದಾಗಿ ತಿಳಿಸಿದ್ದು, ಇನ್ನೂ ಕೆಲವು ವಾರಗಳ ಕಾಲ ದೇಶದಲ್ಲಿ ಲಾಕ್‌ಡೌನ್ ಮಾಡುವ ಅವಶ್ಯಕತೆ ಇದೆ ಎಂದು ಆನಂದ್ ಮಹೀಂದ್ರಾ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.