ನವದೆಹಲಿ:ಚಂದ್ರಯಾನ- 2ರ ವಿಕ್ರಮ್ ಲ್ಯಾಂಡರ್ ಉದ್ದೇಶಿತ ಮಾರ್ಗದಿಂದ ಪಥ ಬದಲಾಯಿಸಿ ಇಸ್ರೋದ ಸಂಪರ್ಕ ಕಳೆದುಕೊಂಡಿದ್ದರೂ ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆಯನ್ನು ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರು ಶ್ಲಾಘಿಸಿದ್ದಾರೆ.
'ನಮ್ಮ ಹೆಮ್ಮೆ, ನಮ್ಮ ಗೆಲುವು'ವೆಂದು ಇಸ್ರೋ ತಂಡವನ್ನ ಶ್ಲಾಘಿಸಿದ ಬಚ್ಚನ್, ಕಮಲ್, ಶಾರುಖ್.. - chandrayaan 2 on Twitter
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ತಾಪ್ಸಿ ಪನ್ನು, ನಿರ್ದೇಶಕ ಕರಣ್ ಜೋಹರ್, ಶಾರುಖ್ ಖಾನ್, ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಸೇರಿ ಹಲವರು ಇಸ್ರೋ ವಿಜ್ಞಾನಿಗಳನ್ನು ಪ್ರಶಂಸಿಸಿ ತಮ್ಮ ಟ್ವಿಟರ್ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ತಾಪ್ಸಿ ಪನ್ನು, ನಿರ್ದೇಶಕ ಕರಣ್ ಜೋಹರ್, ಶಾರುಖ್ ಖಾನ್, ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಸೇರಿದಂತೆ ಹಲವರು ಇಸ್ರೋ ವಿಜ್ಞಾನಿಗಳನ್ನು ಪ್ರಶಂಸಿಸಿ ತಮ್ಮ ಟ್ವಿಟರ್ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.
ಹೆಮ್ಮೆ ಎಂದಿಗೂ ಸೋಲನ್ನು ಎದುರಿಸಲ್ಲ. ನಿಮ್ಮ ಹೆಮ್ಮೆ, ನಮ್ಮ ಗೆಲುವು... ಇಸ್ರೋ ಬಗ್ಗೆ ನಮಗೆ ಹೆಮ್ಮ ಇದೆ ಎಂದು ಅಮಿತಾಬ್ ಬಚ್ಚನ್ ಬರೆದುಕೊಂಡಿದ್ದಾರೆ.ದಕ್ಷಿಣ ಚಿತ್ರರಂಗದ ಮೆಗಾಸ್ಟಾರ್ ಕಮಲ್ ಹಾಸನ್ ಅವರು ಟ್ವೀಟ್ ಮಾಡಿ, “ಇದು ವೈಫಲ್ಯಕ್ಕೆ ಸಮನಾಗಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕಲಿಕೆಯ ರೇಖೆಗಳು ಇರುತ್ತವೆ. ಇದು ಅಮೂಲ್ಯವಾದ ಕಲಿಕೆಯ ಕ್ಷಣ. ನಾವು ಶೀಘ್ರದಲ್ಲೇ ಚಂದ್ರನ ಮೇಲೆ ಇರುತ್ತೇವೆ. ಧನ್ಯವಾದಗಳು ಎಂದಿದ್ದಾರೆ.