ಕರ್ನಾಟಕ

karnataka

ETV Bharat / bharat

ನಿಷೇಧಾಜ್ಞೆಯಿಂದ ಒಂದೇ ವಾರದಲ್ಲಿ ಕಣಿವೆ ರಾಜ್ಯಕ್ಕೆ ಇಷ್ಟೊಂದು ಕೋಟಿ ನಷ್ಟ..!

ಕೇಂದ್ರ ಸರ್ಕಾರದ 'ವಿಶೇಷ' ನಿರ್ಧಾರದ ಬಳಿಕ ಒಂದು ವಾರದಲ್ಲಿ ಕಾಶ್ಮೀರದ ಉದ್ಯಮಿಗಳು ಬರೋಬ್ಬರಿ ಒಂದು ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

By

Published : Aug 12, 2019, 9:32 AM IST

ಕಣಿವೆ ರಾಜ್ಯ

ಶ್ರೀನಗರ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370 ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಒಂದೇ ವಾರಕ್ಕೆ ಕಣಿವೆ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

ಕೇಂದ್ರ ಸರ್ಕಾರದ 'ವಿಶೇಷ' ನಿರ್ಧಾರದ ಬಳಿಕ ಒಂದು ವಾರದಲ್ಲಿ ಕಾಶ್ಮೀರದ ಉದ್ಯಮಿಗಳು ಬರೋಬ್ಬರಿ ಒಂದು ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

370 ರದ್ದು 130 ಕೋಟಿ ಭಾರತೀಯ ಕನಸು... ಕಾಶ್ಮೀರ ಜನತೆಗೆ ಸೆಲ್ಯೂಟ್​​ ಹೇಳಿದ ಪ್ರಧಾನಿ!

ನಿಷೇಧಾಜ್ಞೆಯ ಪರಿಣಾಮ ಜಮ್ಮು ಕಾಶ್ಮೀರದ ಉದ್ಯಮಿಗಳು ಕನಿಷ್ಠ 175 ಕೋಟಿ ಕಳೆದುಕೊಂಡಿದ್ದಾರೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

370 ವಿಧಿ ರದ್ದತಿಯ ಬೆನ್ನಲ್ಲೇ ಕಾಶ್ಮೀರದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಸದ್ಯ ಇದರ ನೇರ ಹೊಡೆತ ಅನುಭವಿಸಿದ್ದು ಬೇಕರಿ ಮತ್ತು ಹೈನೋದ್ಯಮವಾಗಿದ್ದು, ಬೇಕರಿ ಮಾಲೀಕರು ಸುಮಾರು 200 ಕೋಟಿ ನಷ್ಟ ಎದುರಿಸಿದ್ದಾರೆ. ಕರಣ್​ ನಗರದ ಬೇಕರಿ ಮಾಲೀಕರೋರ್ವರು ಒಂದು ವಾರದಲ್ಲಿ ಒಂದು ಕೋಟಿ ನಷ್ಟ ಅನುಭವಿಸಿದ್ದಾರಂತೆ.

ಐತಿಹಾಸಿಕ ಘೋಷಣೆ... ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಗೆ ಕಣಿವೆ ರಾಜ್ಯ!

ಇಂದು ಈದ್ ಹಬ್ಬದ ಹಿನ್ನೆಲೆಯಲ್ಲಿ ಭದ್ರತೆಯನ್ನು ಸಡಿಲಿಕೆ ಮಾಡಲಾಗಿದ್ದು, ಜನ-ಜೀವನ ಸಹಜ ಸ್ಥಿತಿಯತ್ತ ಮರುಳಿತ್ತಿದೆ. ಉಗ್ರರ ಸಂಭಾವ್ಯ ದಾಳಿಯ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆ ತೀವ್ರ ನಿಗಾ ವಹಿಸಿದೆ.

ABOUT THE AUTHOR

...view details