ಅಲಿಗಢ(ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಒಂದು ಸಣ್ಣ ಕಚೋರಿ ಅಂಗಡಿಯ ಮಾಲೀಕ ವಾಣಿಜ್ಯ ತೆರಿಗೆ ಅಧಿಕಾರಿಗಳೇ ಮೂರ್ಛೆ ಹೋಗುವ ರೀತಿ ಮಾಡಿದ್ದಾನೆ.
ಅಲಿಘಢದ ಸೀಮಾ ಸಿನೆಮಾ ಹಾಲ್ ಸಮೀಪ ಮುಖೇಶ್ ಒಡೆತನದ ಸಣ್ಣದಾದ 'ಮುಕೇಶ್ ಕಚೋರಿ' ಅಂಗಡಿ ಇದೆ. ಇಲ್ಲಿ ಸಿಗುವ ಸಿಗುವ ಕಚೋರಿ ಅಂದ್ರೆ, ಸ್ಥಳೀಯರಿಗಂತೂ ಪಂಚಪ್ರಾಣ. ಈ ಅಂಗಡಿಯಲ್ಲಿ ಮುಖೇಶ್ ಬೆಳಗ್ಗಿನಿಂದ ಸಂಜೆಯವರೆಗೂ ಕಚೋರಿ ಹಾಗು ಸಮೋಸಾಗಳನ್ನು ಮಾರಾಟ ಮಾಡುತ್ತಾರೆ. ವಿಶೇಷ ಅಂದ್ರೆ, ನೀವಿಲ್ಲಿ ಕಚೋರಿ ಖರೀದಿಸಿ ತಿನ್ನಬೇಕಾದ್ರೆ ದಿನದ ಯಾವುದೇ ಸಮಯದಲ್ಲಾದ್ರೂ ಸರತಿ ಸಾಲಲ್ಲಿ ನಿಲ್ಲಲೇಬೇಕು. ಯಾಕಂದ್ರೆ ಅಷ್ಟೊಂದು ಜನದಟ್ಟನೆ ಇಲ್ಲಿರುತ್ತಿದೆ. ಅಷ್ಟೊಂದು ಫೇಮಸ್ ಈ ದುಖಾನ್!
ಆದ್ರೆ, ತೀರಾ ಇತ್ತೀಚೆಗಿನವರೆಗೂ ವ್ಯಾಪಾರ ಚೆನ್ನಾಗೇ ಇತ್ತು. ಕೈ ತುಂಬಾ ಅಂದ್ರೆ, ಲಕ್ಷಗಟ್ಟಲೆ ಹಣನೂ ಬರ್ತಾ ಇತ್ತು. ಆದ್ರೆ, ಯಾರೋ ಈತ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ ಎಂಬುದಾಗಿ ಕಮರ್ಶಿಯಲ್ ಟ್ಯಾಕ್ಸ್ ಇಲಾಖೆಗೆ ದೂರು ಕೊಟ್ಟಿದ್ದಾರೆ. ಈತನ ಕಚೋರಿ ಅಂಗಡಿ ಜಿಎಸ್‌ಟಿ ಅಡಿ ನೋಂದಾವಣಿಯಾಗದ ಹಿನ್ನೆಲೆ ಹಾಗು ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟದ ಕಾರಣ ನೀಡಿ ಇಲಾಖೆ ಅಧಿಕಾರಿಗಳು ಈತನಿಗೆ ನೋಟಿಸ್ ಜಾರಿ ಮಾಡಿದ್ದರು.
ಮುಕೇಶ್ ಹೇಳೋದೇನು?