ಮಿಲಿಟರಿ ಹೆಲಿಕಾಪ್ಟರ್ ಪತನ: ಅಫ್ಘಾನಿಸ್ತಾನದ ಇಬ್ಬರು ಸೈನಿಕರ ಸಾವು
ಅಫ್ಘಾನಿಸ್ತಾನದಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಫ್ಘಾನಿಸ್ತಾನದ ಸೇನಾ ಹೆಲಿಕಾಪ್ಟರ್ ಪತನ
ಫರಾಹ್, ಅಫ್ಘಾನಿಸ್ತಾನ:ಹೆಲಿಕಾಪ್ಟರ್ ಪತನವಾಗಿ ಇಬ್ಬರು ಸೈನಿಕರು ಸಾವನ್ನಪ್ಪಿರುವ ಘಟನೆ ಅಫ್ಘಾನಿಸ್ತಾನದ ಪೋರ್ಚಾಂ ಜಿಲ್ಲೆಯ ಫರಾಹ್ ಪ್ರಾಂತ್ಯದಲ್ಲಿ ನಡೆದಿದೆ. ಅಫ್ಘಾನಿಸ್ತಾನದ ಏರ್ಫೋರ್ಸ್ಗೆ ಸೇರಿದ ಎಂಐ - 35 ಯುದ್ಧ ಹೆಲಿಕಾಪ್ಟರ್ ಪತನವಾಗಿದೆ. ಅದರಲ್ಲಿದ್ದ ಇಬ್ಬರೂ ಪೈಲೆಟ್ಗಳೂ ಸಾವನ್ನಪ್ಪಿದ್ದು ಪರಿಶೀಲನೆ ನಡೆಯುತ್ತಿದೆ. ಈ ಹೆಲಿಕಾಪ್ಟರ್ ಸೇನೆಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿತ್ತು ಎಂದು ಫರಾಹ್ ಪ್ರಾಂತ್ಯದ ಗವರ್ನರ್ ಮೊಹಮದ್ ಸ್ಪಷ್ಟಪಡಿಸಿದ್ದಾರೆ. ಅಫ್ಘಾನಿಸ್ತಾನ ರಕ್ಷಣಾ ಇಲಾಖೆಯಿಂದ ಮೃತ ಸೈನಿಕರಿಗೆ ಸಂತಾಪ ಸೂಚಿಸಲಾಗಿದೆ.