ಕರ್ನಾಟಕ

karnataka

ETV Bharat / bharat

20ಕ್ಕೂ ಹೆಚ್ಚು ಜನರನ್ನ ಹಗ್ಗದಿಂದ ಕಟ್ಟಿ, ಗೋಮಾತೆಗೆ ಜೈ ಹೇಳಿಸಿದ ಗ್ರಾಮಸ್ಥರು! - ಈಟಿವಿ ಭಾರತ

ಜಾನುವಾರು ಸಾಗಿಸುತ್ತಿದ್ದರು ಎನ್ನಲಾದ ಜನರನ್ನು ಗ್ರಾಮಸ್ಥರು ಹಗ್ಗದಿಂದ ಕಟ್ಟಿ, ಗೋಮಾತೆಗೆ ಜೈ ಎಂದು ಹೇಳಿಸಿದ್ದಾರೆ. ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.

20ಕ್ಕೂ ಹೆಚ್ಚು ಜನರನ್ನ ಹಗ್ಗದಿಂದ ಕಟ್ಟಿ, ಗೋಮಾತೆಗೆ ಜೈ ಹೇಳಿಸಿದ ಗ್ರಾಮಸ್ಥರು!

By

Published : Jul 8, 2019, 5:46 AM IST

ಖಂಡ್ವಾ: ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆನ್ನಲಾದ 20ಕ್ಕೂ ಹೆಚ್ಚು ಜನರನ್ನು ಗ್ರಾಮಸ್ಥರೇ ಹಿಡಿದು, ಹಗ್ಗದಿಂದ ಕಟ್ಟಿದ ಘಟನೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದರು ಎನ್ನಲಾದ 20ಕ್ಕೂ ಹೆಚ್ಚು ಜನರನ್ನು ಸನ್ವಾಲಿಖೆಡ ಗ್ರಾಮಸ್ಥರು ತಡೆದಿದ್ದರು. ಬಳಿಕ ಅವರನ್ನು ಹಗ್ಗದಲ್ಲಿ ಕಟ್ಟಿ, ಅವರಿಂದ ಗೋ ಮಾತೆಗೆ ಜೈ ಎಂದು ಘೋಷಣೆ ಹೇಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

20ಕ್ಕೂ ಹೆಚ್ಚು ಜನರನ್ನ ಹಗ್ಗದಿಂದ ಕಟ್ಟಿ, ಗೋಮಾತೆಗೆ ಜೈ ಹೇಳಿಸಿದ ಗ್ರಾಮಸ್ಥರು!

ವಿಡಿಯೋ ವೈರಲ್ ಆಗ್ತಿದ್ದಂತೆ ಗ್ರಾಮಸ್ಥರ ಹಾಗೂ ಗೋವು ಸಾಗಿಸುತ್ತಿದ್ದರು ಎನ್ನಲಾದವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details