ಕರ್ನಾಟಕ

karnataka

ETV Bharat / bharat

ಜ. ಕಾರಿಯಪ್ಪ ಸೇರಿ 50ಕ್ಕೂ ಹೆಚ್ಚು ಹುತಾತ್ಮ ಯೋಧರ ದೇವಸ್ಥಾನ... ಎಲ್ಲಿದೆ ಗೊತ್ತಾ!?

ಸಾಮಾನ್ಯವಾಗಿ ನಾವು ದೇವಾನುದೇವತೆಗಳ, ತಂದೆ-ತಾಯಿ ಹಾಗೂ ಗಾಂಧೀಜಿಯವರ ದೇವಾಲಯಗಳನ್ನು ನೋಡಿದ್ದೇವೆ. ಆದ್ರೆ ಹುತಾತ್ಮ ಯೋಧರ ದೇವಸ್ಥಾನವೊಂದನ್ನು ಮಾಜಿ ಯೋಧರೊಬ್ಬರು ಕಟ್ಟಿಸಿದ್ದಾರೆ.

By

Published : Jan 27, 2020, 10:12 AM IST

A temple dedicated, A temple dedicated to martyrs, A temple dedicated to martyrs in Ujjain, ಹುತಾತ್ಮ ಯೋಧರ ದೇವಸ್ಥಾನ, ಉಜ್ಜೈನ್​ನಲ್ಲಿ ಹುತಾತ್ಮ ಯೋಧರ ದೇವಸ್ಥಾನ, ಹುತಾತ್ಮ ಯೋಧರ ದೇವಸ್ಥಾನ ಸುದ್ದಿ,
ಜನರಲ್​ ಕಾರಿಯಪ್ಪ ಸೇರಿ ಹುತಾತ್ಮ ಯೋಧರ ದೇವಸ್ಥಾನ ಎಲ್ಲಿದೆ ಗೊತ್ತಾ

ಉಜ್ಜೈನ್​: ಸಾಮಾನ್ಯವಾಗಿ ನಾವು ದೇವಾನುದೇವತೆಗಳ, ತಂದೆ-ತಾಯಿ ಹಾಗೂ ಗಾಂಧೀಜಿಯವರ ದೇವಾಲಯಗಳನ್ನು ನೋಡಿದ್ದೇವೆ. ಆದ್ರೆ ಹುತಾತ್ಮ ಯೋಧರ ದೇವಸ್ಥಾನವೊಂದನ್ನು ಮಾಜಿ ಯೋಧರೊಬ್ಬರು ಕಟ್ಟಿಸಿದ್ದಾರೆ.

ಎಲ್ಲಿದೆ ಹುತಾತ್ಮ ಯೋಧರ ದೇವಸ್ಥಾನ?
ಮಧ್ಯಪ್ರದೇಶದ ಉಜ್ಜೈನ್​ನಲ್ಲಿ ಬಾಬಾ ಮಹಾಕಾಲ್​ ದೇವಾಲಯ ಹೇಗೆ ಪ್ರಸಿದ್ಧಿಯೋ ಹಾಗೆಯೇ ಬಿಸಿಲೂರಿನ ನೃಸಿಂಗ್​ ಘಾಟ್​ನಲ್ಲಿರುವ ಹುತಾತ್ಮ ಯೋಧರ ದೇವಾಲಯವೂ ಪ್ರಸಿದ್ಧಿಯಾಗಿದೆ.

ಜನರಲ್​ ಕಾರಿಯಪ್ಪ ಸೇರಿ ಹುತಾತ್ಮ ಯೋಧರ ದೇವಸ್ಥಾನ ಎಲ್ಲಿದೆ ಗೊತ್ತಾ

ಈ ದೇವಾಲಯ ಕಟ್ಟಿಸಿದವರು ಯಾರು?
ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರ ದೇವಾಲಯವನ್ನು ಕಟ್ಟಿಸಿದವರು ಮಾಜಿ ಯೋಧ ಜಜ ದಾನ್​ಸಿಂಗ್​​ ಚೌಧರಿ. ಭಾರತ ಮಾತೆಗಾಗಿ ಪ್ರಾಣಬಿಟ್ಟ ವೀರ ಯೋಧರ ದೇವಾಲಯವನ್ನು 2009ರಲ್ಲಿ ಉಜ್ಜೈನ್​ನ ನೃಸಿಂಗ್​ ಘಾಟ್​ನಲ್ಲಿ ಕಟ್ಟಿಸಿದರು. ಈ ದೇವಾಲಯ ದೇಶ್ಯಾದ್ಯಂತ ಪ್ರಸಿದ್ಧಿ ಪಡೆದಿದೆ.

ಇಲ್ಲಿದೆ ಕೊಡಗು ವೀರನ ಮೂರ್ತಿ...
ಇನ್ನು ಈ ದೇವಾಲಯದಲ್ಲಿ ಫೀಲ್ಡ್ ಮಾರ್ಷಲ್ ಜನರಲ್ ಕಾರಿಯಪ್ಪನವರ ಮೂರ್ತಿ ಸೇರಿದಂತೆ 50ಕ್ಕೂ ಹೆಚ್ಚು ಹುತಾತ್ಮ ಯೋಧರ ಮೂರ್ತಿಗಳನ್ನು ನಾವು ಇಲ್ಲಿ ಕಾಣಬಹುದು. ಪ್ರತಿಯೊಂದು ಮೂರ್ತಿಯ ಕೆಳಭಾಗದಲ್ಲಿ ಹುತಾತ್ಮ ಯೋಧರ ಸಾಹಸ ಮತ್ತು ಅವರ ಇತಿಹಾಸದ ಬಗ್ಗೆ ತಿಳಿಸಲಾಗಿದೆ.

ಗಣರಾಜ್ಯೋತ್ಸವಕ್ಕೆ ಸಾವಿರಾರು ಜನ ಭೇಟಿ...
ಗಣರಾಜ್ಯೋತ್ಸವದಂದು ಈ ಹುತಾತ್ಮ ಯೋಧರ ದೇವಾಲಯಕ್ಕೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಈ ಬಾರಿ ನಡೆದ 71ನೇ ಗಣರಾಜ್ಯೋತ್ಸವಕ್ಕೆ ಅನೇಕರು ಈ ದೇವಾಲಯಕ್ಕೆ ಭೇಟಿ ನೀಡಿ ಪ್ರತಿ ಹುತಾತ್ಮ ಯೋಧರನ್ನು ನಮಸ್ಕರಿಸಿ ಅವರ ಬಗ್ಗೆ ತಿಳಿದುಕೊಂಡರು.

ಇನ್ನು ಈ ದೇವಾಲಯ ಕಟ್ಟಿದ ಮಾಜಿ ಯೋಧ ಜಜ ದಾನ್​ಸಿಂಗ್​​ ಚೌಧರಿ ಇಹಲೋಕ ತ್ಯಜಿಸಿದ್ದಾರೆ. ಈ ದೇವಾಲಯವನ್ನು ರಾಮಸಿಂಗ್​ ಎಂಬುವರು ನೋಡಿಕೊಳ್ಳುತ್ತಿದ್ದು, ಹುತಾತ್ಮ ಯೋಧರ ವೀರತ್ವ ಮತ್ತು ಇವರ ಆದರ್ಶಗಳನ್ನು ಎಲ್ಲರೂ ಪಾಲಿಸಲಿ ಎಂಬುದು ದಾನ್​ಸಿಂಗ್​ ಅವರ ಉದ್ದೇಶವಾಗಿತ್ತು ಎಂದು ರಾಮಸಿಂಗ್​ ಹೇಳಿದ್ದಾರೆ.

ABOUT THE AUTHOR

...view details