ಲಡಾಖ್:ದಾರಿ ತಪ್ಪಿ ಬಂದಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಸೈನಿಕನನ್ನು ಪೂರ್ವ ಲಡಾಖ್ನ ಡೆಮ್ಚೋಕ್ ಸೆಕ್ಟರ್ನಲ್ಲಿ ಭಾರತೀಯ ಸೇನೆ ಬಂಧಿಸಿದ್ದು, ಆತನನ್ನು ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿದೆ.
ಪೂರ್ವ ಲಡಾಖ್ನಲ್ಲಿ ದಾರಿ ತಪ್ಪಿದ್ದ ಚೀನಾ ಸೈನಿಕನ ಬಂಧಿಸಿದ ಭಾರತೀಯ ಸೇನೆ
ಭಾರತ, ಚೀನಾ ಗಡಿಯಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ಕಡಿಮೆಯಾದ ಬೆನ್ನಲ್ಲೇ ಚೀನಾ ಸೈನಿಕನೊಬ್ಬ ಪೂರ್ವ ಲಡಾಖ್ನಲ್ಲಿ ಸೆರೆ ಸಿಕ್ಕಿದ್ದು, ಆತನನ್ನು ವಾಪಸ್ ಕಳಿಸಲು ಪ್ರಕ್ರಿಯೆ ಶುರುವಾಗಿದೆ.
ಭಾರತೀಯ ಸೇನೆ
ಚೀನಾ ಸೇನೆಯಲ್ಲಿ ಕಾರ್ಪೋರಲ್ ಹುದ್ದೆಯಲ್ಲಿರುವ ಆತನಿಗೆ ಚಳಿಯಿಂದ ರಕ್ಷಿಸಿಕೊಳ್ಳಲು ಹಾಗೂ ಪ್ರತಿಕೂಲ ಹವಾಮಾನದಿಂದ ರಕ್ಷಿಸಲು ಬಟ್ಟೆಗಳು, ಆಮ್ಲಜನಕ, ಆಹಾರ ಮತ್ತು ವೈದ್ಯಕೀಯ ನೆರವು ನೀಡಲಾಗಿದೆ.
ಈಗಾಗಲೇ ಚೀನಾ ಅಧಿಕಾರಿಗಳಿಂದ ಸೈನಿಕ ಕಾಣೆಯಾಗಿದ್ದಾನೆ ಎಂಬ ಸಂದೇಶ ಬಂದಿದ್ದು, ಚುಶುಲ್-ಮೋಲ್ಡೊ ಮೀಟಿಂಗ್ ಪಾಯಿಂಟ್ನಲ್ಲಿ ಕೆಲವೊಂದು ಔಪಚಾರಿಕ ಪ್ರಕ್ರಿಯೆಯನ್ನು ಪೂರೈಸಿದ ಬಳಿಕ ಆತನನ್ನು ಚೀನಿ ಸೇನೆಗೆ ಹಸ್ತಾಂತರಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.