ಕರ್ನಾಟಕ

karnataka

ದೆಹಲಿ ಚುನಾವಣಾ ಫಲಿತಾಂಶ: ವಿಧಾನಸಭೆಗೆ ಆಯ್ಕೆಯಾದ ಮಹಿಳೆಯರೆಷ್ಟು?

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಮಹಿಳಾ ಶಾಸಕಿಯರಾಗಿ 8 ಮಂದಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಆಮ್​ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ 9 ಮಂದಿ ಪೈಕಿ 8 ಮಹಿಳೆಯರು ಗೆಲುವು ಸಾಧಿಸಿದ್ದು ವಿಶೇಷ.

By

Published : Feb 11, 2020, 11:58 PM IST

Published : Feb 11, 2020, 11:58 PM IST

8 women candidates win Delhi Assembly election, all from AAP
ಶಾಸಕಿಯಾಗಿ ಆಯ್ಕೆಯಾದ ಅತಿಶಿ ಅವರ ಸಂಭ್ರಮ

ನವದೆಹಲಿ:ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಮಹಿಳಾ ಶಾಸಕಿಯರಾಗಿ 8 ಮಂದಿ ಆಯ್ಕೆಯಾಗಿದ್ದಾರೆ. ಈ ಬಾರಿ ಆಮ್​ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ 9 ಮಂದಿಯ ಪೈಕಿ 8 ಮಹಿಳೆಯರು ವಿಜೇತರಾಗಿ ಹೊರಹೊಮ್ಮಿದ್ದಾರೆ.

ಆಯ್ಕೆಯಾದ ಮಹಿಳಾ ಶಾಸಕಿಯರು:

1.ಅತಿಶಿ, 2.ರಾಖಿ ಬಿರ್ಲಾ, 3.ಭಾವನ ಗೌರ್​, 4.ಪ್ರಮೀಳಾ ಟೋಕಾಸ್​, 5.ಎ.ಧನ್ವತಿ ಚಂಡೇಲಾ, 6.ಬಂದನಾ ಕುಮಾರಿ, 7.ಪ್ರೀತಿ ತೋಮಾರ್, 8.ರಾಜ್​ ಕುಮಾರಿ ಧಿಲ್ಲನ್​ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಎಎಪಿ ಅಭ್ಯರ್ಥಿ ಅತಿಶಿ ಅವರು ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಶಿವಾನಿ ಚೋಪಾ ಅವರನ್ನು 11,393 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿದ್ದ ಧರಂಬೀರ್​ ಸಿಂಗ್​ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಎಎಪಿ ಅಭ್ಯರ್ಥಿ ಪ್ರಮೀಳಾ ಟೋಕಾಸ್ ತಮ್ಮ ಆರ್.ಕೆ.ಪುರಂ ವಿಧಾನಸಭಾ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಶರ್ಮಾ ಅವರನ್ನು 10,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

ಮಂಗೋಲ್ ಪುರಿ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ರಾಖಿ ಬಿರ್ಲಾ ಅವರು ಬಿಜೆಪಿಯ ಕರಮ್ ಸಿಂಗ್ ಕರ್ಮ ಅವರನ್ನು 30,116 ಮತಗಳ ಅಂತರದಿಂದ ಸೋಲಿಸಿದರು. ಪಾಲಂ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಭಾವನಾ ಗೌರ್ 32,765 ಮತಗಳಿಂದ ಬಿಜೆಪಿಯ ವಿಜಯ್ ಪಂಡಿತ್ ವಿರುದ್ಧ ಜಯಗಳಿಸಿದರು.

ರಾಜೌರಿ ಗಾರ್ಡನ್‌ನಿಂದ ಎಎಪಿಯಿಂದ ಸ್ಪರ್ಧಿಸಿದ್ದ ಎ.ಧನ್ವತಿ ಚಂಡೇಲಾ ಅವರು ಬಿಜೆಪಿಯ ರಮೇಶ್ ಖನ್ನಾ ಅವರನ್ನು ಸೋಲಿಸಿ 22,972 ಸ್ಥಾನಗಳನ್ನು ಗಳಿಸಿದ್ದಾರೆ.

ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ಅವರು ಎಎಪಿಯ ಬಂದಾನ ಕುಮಾರಿ ವಿರುದ್ಧ ಕೇವಲ 3,000 ಮತಗಳಿಂದ ಸೋತರು. ತ್ರಿನಗರ ಕ್ಷೇತ್ರದಲ್ಲೂ ಎಎಪಿ ಅಭ್ಯರ್ಥಿ ಪ್ರೀತಿ ತೋಮರ್ ಅವರು ಬಿಜೆಪಿಯ ತಿಲಕ್ ರಾಮ್ ಗುಪ್ತಾ ಅವರನ್ನು 10,710 ಮತಗಳಿಂದ ಸೋಲಿಸಿದರು.

ಹರಿ ನಗರದಿಂದ ಸ್ಪರ್ಧಿಸಿದ್ದ ಎಎಪಿಯ ರಾಜ್ ಕುಮಾರಿ ಧಿಲ್ಲನ್ ಅವರು ಬಿಜೆಪಿ ಮುಖಂಡ ತಾಜಿಂದರ್ ಪಾಲ್ ಸಿಂಗ್ ಅವರನ್ನು 20,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಈ ಬಾರಿ ಆಮ್​ ಆದ್ಮಿ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಒಟ್ಟು 24 ಮಹಿಳೆಯರು ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲಿ ಮಹಿಳಾ ಶಾಸಕರಾಗಿ 6 ಮಂದಿ ವಿಧಾನಸಭೆ ಪ್ರವೇಶಿಸಿದ್ದರು.

ABOUT THE AUTHOR

...view details