ಗ್ರೇಟರ್ ನೋಯ್ಡಾ :ಪ್ರಯಾಣಿಕರು ಸಾಗುತ್ತಿದ್ದ ಬಸ್ವೊಂದು ಟ್ರಕ್ಗೆ ಗುದ್ದಿದ ಪರಿಣಾಮ 8 ಮಂದಿ ಸಾವಿಗೀಡಾಗಿದ್ದು, 30 ಮಂದಿ ಗಾಯಗೊಂಡಿರುವ ಘಟನೆ ಗ್ರೇಟರ್ ನೊಯ್ಡಾದ ಯಮುನಾ ಎಕ್ಸ್ಪ್ರೆಸ್ ಹೈವೇನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ 5 ಗಂಟೆಗೆ ಆಗ್ರಾದಿಂದ ಬರುತ್ತಿದ್ದ ಬಸ್ ಯಮುನಾ ಎಕ್ಸ್ಪ್ರೆಸ್ ವೇಯ ಜಿರೋ ಪಾಯಿಂಟ್ನಿಂದ 29 ಕಿ.ಮೀ ದೂರದ ರಬುಪುರ ಥಾಣಾ ಏರಿಯಾ ಬಳಿ ಟ್ರಕ್ಗೆ ಗುದ್ದಿದೆ. ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. ಬಸ್ನ ಬ್ರೇಕ್ ಫೇಲ್ ಆಗಿದ್ದೇ ದುರ್ಘಟನೆಗೆ ಕಾರಣ ಎನ್ನಲಾಗ್ತಿದೆ.
ಬಸ್-ಟ್ರಕ್ ಅಪಘಾತದಲಲ್ಲಿ8 ಮಂದಿ ಮೃತ ಗಾಯಾಳುಗಳನ್ನು ಜೆವಾರ್ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. 8 ಮೃತದೇಹಗಳನ್ನು ಶವಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಇಂತಹ ಅಪಘಾತಗಳು ನಡೆಯುತ್ತಲೇ ಇವೆ. 2017ರವರೆಗೆ ಇದೇ ಮಾರ್ಗದಲ್ಲಿ 140 ಮಂದಿ ಮೃತಪಟ್ಟಿದ್ದು, 1426 ಮಂದಿ ಗಾಯಗೊಂಡಿದ್ದಾರೆ. ಪದೇಪದೆ ಅಪಘಾತಗಳು ಸಂಭವಿಸುತ್ತಿರುವುದರಿಂದ ಜನರು ಆತಂಕಗೊಡಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಅಪಘಾತದ ಸುದ್ದಿ ಕೇಳಿ, ಸ್ಥಳೀಯ ಆಡಳಿತ ಕೂಡಲೇ ಪ್ರಯಾಣಿಕರ ನೆರವಿಗೆ ಧಾವಿಸಬೇಕೆಂದು ಆದೇಶಿಸಿದ್ದಾರೆ.