ಕರ್ನಾಟಕ

karnataka

ಮುತ್ತಿನ ನಗರಿಗೆ ಕುತ್ತು ತಂದ ವರುಣ.. ಒಂದೇ ದಿನದಲ್ಲಿ 11 ಮಂದಿ ದುರ್ಮರಣ

ಹೈದರಾಬಾದ್​ನಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಂಡಲಗುಂಡ ಪ್ರದೇಶದಲ್ಲಿ ಮನೆ ಮೇಲೆ ಬೃಹತ್ ಬಂಡೆ ಉರುಳಿಬಿದ್ದು 8 ಜನ ಮೃತಪಟ್ಟಿದ್ದರೆ, ಮಳೆಯ ಅವಾಂತರದಿಂದ ಒಂದೇ ದಿನದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.

By

Published : Oct 14, 2020, 7:41 AM IST

Published : Oct 14, 2020, 7:41 AM IST

Updated : Oct 14, 2020, 9:56 AM IST

8 crushed to death after boulder
ಬೃಹತ್ ಬಂಡೆ ಉರುಳಿ 8 ಮಂದಿ ದುರ್ಮರಣ

ಹೈದರಾಬಾದ್ (ತೆಲಂಗಾಣ): ವರುಣನ ರೌದ್ರಾವತಾರಕ್ಕೆ ಮುತ್ತಿನ ನಗರಿಯ ಜನರು ನಲುಗಿದ್ದಾರೆ. ಅತಿಯಾದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದಾಗಿ ಬಂಡಲಗುಡ ಪ್ರದೇಶದಲ್ಲಿ ಮನೆ ಮೇಲೆ ಬೃಹತ್ ಬಂಡೆವೊಂದು ಉರುಳಿಬಿದ್ದ ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ದಕ್ಷಿಣ ವಲಯದ ಡಿಜಿಪಿ ಗಜರಾವ್ ಭೂಪಾಲ್ ತಿಳಿಸಿದ್ದಾರೆ.

ಈ ಮಧ್ಯೆ ಸಂಸದ ಅಸಾದುದ್ದೀನ್ ಓವೈಸಿ, ಖಾಸಗಿ ಗೋಡೆ ಕುಸಿದು, ಬಂಡಲಗುಡ ಮೊಹಮ್ಮದಿಯ ಬೆಟ್ಟದಲ್ಲಿ 9 ಮಂದಿ ಮೃತಪಟ್ಟಿದ್ದಾರೆಂದು ಟ್ವೀಟ್ ಮಾಡಿದ್ದಾರೆ. ‘ನಾನು ಬಂಡಲಗುಡದ ಬೆಟ್ಟಕ್ಕೆ ಭೇಟಿ ನೀಡಿ ತಪಾಸಣೆ ಮಾಡಿದ್ದೇನೆ. ಅಲ್ಲಿ ಗೋಡೆ ಕುಸಿದು, 9 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಂಶಾಬಾದ್​​ನ ಬಸ್​ನಲ್ಲಿ ಸಿಲುಕಿದ್ದ ಜನರನ್ನು ಸ್ಥಳಾಂತರ ಮಾಡಿದ್ದೇವೆ. ಈ ವರ್ಷ ಹಿಂದೆಂದೂ ಕಂಡು ಕೇಳರಿಯದಂಥ ಮಳೆಯಾಗುತ್ತಿದ್ದು, ಸಾರ್ವಜನಿಕರೆಲ್ಲರೂ ಮನೆಯಲ್ಲೇ ಇರಿ’ ಎಂದು ಟ್ವೀಟ್ ಮಾಡಿದ್ದಾರೆ.

ಚಂದ್ರಯಾನ ಗುಟ್ಟಾ ಕ್ಷೇತ್ರದ ಶಾಸಕ ಅಕ್ಬರುದ್ದೀನ್ ಓವೈಸಿ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಬಳಿಕ ಮೃತರ ಕುಟುಂಬಗಳನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತೆಲಂಗಾಣದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ಪರಿಸ್ಥಿತಿ ಹೀಗೆ ಮುಂದುವರಿಯಲಿದ್ದು, ಜನರೆಲ್ಲರೂ ಮನೆಯೊಳಗೆ ಇರಬೇಕೆಂದು ಹೈದರಾಬಾದ್ ಮಹಾನಗರ ಪಾಲಿಕೆ ಮನವಿ ಮಾಡಿದೆ.

ಭಾರಿ ಮಳೆಗೆ ಬೃಹತ್ ಬಂಡೆ ಉರುಳಿ 8 ಮಂದಿ ದುರ್ಮರಣ

ಇನ್ನು, ಇಬ್ರಾಹಿಂಪಟ್ಟಣಂದಲ್ಲಿ ಮಂಗಳವಾರ ಮನೆಯ ಛಾವಣಿ ಕುಸಿದು 40 ವರ್ಷದ ಮಹಿಳೆ ಮತ್ತು ಅವರ ಮಗಳು ಮೃತಪಟ್ಟಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ಮೂಲಕ ಹೈದರಾಬಾದ್​ನಲ್ಲಿ ಭಾರಿ ಮಳೆಗೆ ಒಂದೇ ದಿನದಲ್ಲಿ 11 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಎಲ್​ಬಿ ನಗರದಲ್ಲಿ 25 ಸೆಂಟಿ ಮೀಟರ್ ಮಳೆಯಾಗಿದ್ದು, ಇನ್ನೂ ಕೆಲ ಗಂಟೆಗಳ ಕಾಲ ಹೀಗೆ ಮುಂದುವರಿಯಲಿದೆ. ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೆ DRF ತಂಡಗಳು ಶ್ರಮಿಸುತ್ತಿವೆ ಎಂದು ವಿಪತ್ತು ನಿರ್ವಹಣಾ ನಿರ್ದೇಶಕರು ಟ್ವೀಟ್ ಮಾಡಿದ್ದಾರೆ.

Last Updated : Oct 14, 2020, 9:56 AM IST

ABOUT THE AUTHOR

...view details