ಕರ್ನಾಟಕ

karnataka

ಚೆನ್ನೈ ಹೊರವಲಯದಲ್ಲಿ 740 ಟನ್‌ ಅಮೋನಿಯಂ ನೈಟ್ರೇಟ್ ಸಂಗ್ರಹ​

2015 ರಲ್ಲಿ ಕರೂರ್​ ಮೂಲದ ರಾಸಾಯನಿಕ ಸಂಸ್ಥೆ ಆಮದು ಮಾಡಿಕೊಂಡಿದ್ದ ದೊಡ್ಡ ಪ್ರಮಾಣದ ರಾಸಾಯನಿಕವನ್ನು ಕಸ್ಟಮ್ಸ್​​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೊಂದು ವಸತಿ ರಹಿತ ಪ್ರದೇಶವಾಗಿದ್ದು, ಇ-ಹರಾಜು ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದ್ದಾರೆ.

By

Published : Aug 6, 2020, 8:33 PM IST

Published : Aug 6, 2020, 8:33 PM IST

ammonium nitrate
ammonium nitrate

ಚೆನ್ನೈ: ಲೆಬನಾನ್​ ರಾಜಧಾನಿ ಬೈರುತ್​​ನಲ್ಲಿ 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಚೆನ್ನೈನಲ್ಲೂ 740 ಟನ್​​ ಅಮೋನಿಯಂ ನೈಟ್ರೇಟ್​​​ ಸಂಗ್ರಹಿಸಿಟ್ಟಿದ್ದು ಬೆಳಕಿಗೆ ಬಂದಿದೆ.

ಚೆನ್ನೈನ ಹೊರವಲಯದಲ್ಲಿರುವ ಗೊದಾಮಿನಲ್ಲಿ ಇಷ್ಟೊಂದು ಪ್ರಮಾಣದ ಅಮೋನಿಯಂ ಸಂಗ್ರಹ ಮಾಡಲಾಗಿದ್ದು, ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಸ್ಟಮ್ಸ್​​​ ಅಧಿಕಾರಿಗಳು ತಿಳಿಸಿದ್ದಾರೆ.

2015 ರಲ್ಲಿ ಕರೂರ್​ ಮೂಲದ ರಾಸಾಯನಿಕ ಸಂಸ್ಥೆ ಆಮದು ಮಾಡಿಕೊಂಡಿದ್ದ ದೊಡ್ಡ ಪ್ರಮಾಣದ ರಾಸಾಯನಿಕವನ್ನು ಕಸ್ಟಮ್ಸ್​​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೊಂದು ವಸತಿ ರಹಿತ ಪ್ರದೇಶವಾಗಿದ್ದು, ಇ-ಹರಾಜು ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಲೆಬನಾನ್​ನ ಬೈರುತ್​‌ ಬಂದರಿನಲ್ಲಿ ಭಯಾನಕ ಸ್ಫೋಟ; 73 ಮಂದಿ ಸಾವು, 3,700 ಜನರಿಗೆ ಗಾಯ!

ಲೆಬನಾನ್​​ ರಾಜಧಾನಿ ಬಂದರು ಪ್ರದೇಶ ಬೈರುತ್​ನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 100ಕ್ಕೂ ಅಧಿಕ ಜನರು ಸಾವನ್ನಪ್ಪಿ, 4 ಸಾವಿರ ಮಂದಿ ಗಾಯಗೊಂಡಿದ್ದರು.

ಅಮೋನಿಯಂ ನೈಟ್ರೇಟ್ ಬಗ್ಗೆ ಒಂದಿಷ್ಟು ಮಾಹಿತಿ..

ಅಮೋನಿಯಂ ನೈಟ್ರೇಟ್ ಕೃಷಿ ಚಟುವಟಿಕೆಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರಗಳಿಗೆ ಬೇಕಾದ ಪ್ರಮುಖ ಕಚ್ಚಾ ವಸ್ತು. ಶುದ್ಧ ರೂಪದಲ್ಲಿ ಅಮೋನಿಯಂ ನೈಟ್ರೇಟ್​​ ಬಿಳಿ ಹರಳು ರೂಪದಲ್ಲಿದ್ದು, ನೀರಿನಲ್ಲಿ ಕರಗಬಲ್ಲ ರಾಸಾಯನಿಕವಾಗಿದೆ. ಗಣಿಗಳಲ್ಲಿ ಸ್ಪೋಟಕವನ್ನಾಗಿಯೂ ಈ ವಸ್ತು ಬಳಕೆಯಾಗುತ್ತದೆ.

ABOUT THE AUTHOR

...view details