ಕರ್ನಾಟಕ

karnataka

ಕೊರೊನ ಎಫೆಕ್ಟ್​: ಭಾರತ- ಬಾಂಗ್ಲಾ ಗಡಿಯಲ್ಲಿ ಕಾಶ್ಮೀರ ಮೂಲದ 70 ವಿದ್ಯಾರ್ಥಿಗಳು

ಬಾಂಗ್ಲಾದೇಶದ ಗಡಿ ಮೂಲಕ ದೇಶದೊಳಗೆ ಬರಲು ಅವಕಾಶ ನೀಡಬೇಕಾಗಿ ವಿದ್ಯಾರ್ಥಿಗಳು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ. ಇವರೆಲ್ಲ ಬಾಂಗ್ಲಾದೇಶದ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ.

By

Published : Mar 24, 2020, 11:58 PM IST

Published : Mar 24, 2020, 11:58 PM IST

Corona
ಕೊರೊನ ಎ

ನವದೆಹಲಿ:ವಿಶ್ವವ್ಯಾಪಿಯಾಗಿ ಕೊರೊನಾ ವೈರಸ್​ ಭೀತಿ ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ದೇಶದಾದ್ಯಂತ ಲಾಕ್​ಡೌನ್​ ಮಾಡಲು ಸೂಚನೆ ನೀಡಿದೆ. ಆದರೆ ಭಾರತ- ಬಾಂಗ್ಲಾ ಗಡಿಯಲ್ಲಿ ಕಾಶ್ಮೀರ ಮೂಲದ 70 ವಿದ್ಯಾರ್ಥಿಗಳು ಸಿಲುಕಿದ್ದು, ತಮ್ಮನ್ನ ದೇಶದೊಳಗೆ ಕರೆದುಕೊಳ್ಳಲು ವಿನಂತಿ ಮಾಡಿಕೊಂಡಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್​ ಆಗಿದೆ.

ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ, "ಈಗಾಗಲೇ ಢಾಕಾದ ಹೈಕಮಿಷನ್​ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರನ್ನು ಭಾರತಕ್ಕೆ ಕರೆತರುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಬಾಂಗ್ಲಾದಲ್ಲಿ ಸುಮಾರು 7000 ಭಾರತೀಯರು ಮಾತ್ರವಲ್ಲದೆ, ಫ್ರಾನ್ಸ್​, ನೆದರ್​ಲ್ಯಾಂಡ್​, ಯುಎಸ್​ನ ಜನರು ಇದ್ದು, ಅವರಿಗೆ ಬೇಕಾದ ಸೌಲಭ್ಯಗಳನ್ನು ತಲುಪಿಸುವ ಕೆಲ ಮಾಡಲಾಗುತ್ತದೆ" ಎಂದಿದ್ದಾರೆ.

ಬಾಂಗ್ಲಾದೇಶದ ಗಡಿ ಮೂಲಕ ದೇಶದೊಳಗೆ ಬರಲು ಅವಕಾಶ ನೀಡಬೇಕಾಗಿ ವಿದ್ಯಾರ್ಥಿಗಳು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ. ಇವರೆಲ್ಲ ಬಾಂಗ್ಲಾದೇಶದ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ.

ಕಾಶ್ಮೀರಿ ವಿದ್ಯಾರ್ಥಿಗಳು ಇಂಡೋ-ಬಾಂಗ್ಲಾ ಗಡಿಯ ಪೆತ್ರಪೋಲ್​-ಬೆನಾಪೋಲ್​ ಎಂಬ ಭಾಗದಲ್ಲಿ ಸಿಲುಕಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಆದರೆ ಕೊರೊನಾ ಭೀತಿ ವಿಶ್ವವನ್ನೇ ಆವರಿಸಿದೆ. ಈ ಸಂದರ್ಭದಲ್ಲಿ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಎಲ್ಲ ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನಯಾನವನ್ನ ರದ್ದು ಮಾಡಿದೆ.

ಅಂದ ಹಾಗೆ ಬಾಂಗ್ಲಾದೇಶ ಅಷ್ಟೇ ಅಲ್ಲ ಅಮೆರಿಕ, ನೆದರ್ಲಾಂಡ್​​, ಫ್ರಾನ್ಸ್​​ ಸೇರಿದಂತೆ ಎಲ್ಲ ರಾಷ್ಟ್ರಗಳು ವಿಮಾನಯಾನ ರದ್ದು ಮಾಡಿವೆ. ಇನ್ನು ಕೌಲಾಲಂಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯರಿಗೆ ರಾಯಭಾರ ಕಚೇರಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು, ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಮಾರ್ಚ್​ 31 ರವೆರೆಗೆ ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ABOUT THE AUTHOR

...view details