ಲೂಧಿಯಾನ್(ಪಂಜಾಬ್):ಮಹಾಮಾರಿ ಕೊರೊನಾ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಹಬ್ಬುತ್ತಿದ್ದು, ಇದರಿಂದ ಇಡೀ ಭಾರತ ಭೀತಿಗೊಳಗಾಗಿದೆ. ಇದೀಗ ಪಂಜಾಬ್ನಲ್ಲಿ 52 ವರ್ಷದ ಪೊಲೀಸ್ ಅಧಿಕಾರಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಬೇರೆಡೆಗೆ ಪೋಸ್ಟ್ ಆಗಿದ್ದ ಪೊಲೀಸ್ ಅಧಿಕಾರಿಯಲ್ಲೂ ಕೊರೊನಾ ಪಾಸಿಟಿವ್!
ಪಂಜಾಬ್ನ ಬೇರೊಂದು ಸ್ಥಳಕ್ಕೆ ವರ್ಗಾವಣೆಗೊಂಡಿದ್ದ ಅಧಿಕಾರಿಯೊಬ್ಬರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಅನೇಕ ಅನುಮಾನಗಳಿಗೆ ಎಡೆ ಮಾಡಿದೆ.
52-year old Gazetted Officer of Punjab Police
ಲೂಧಿಯಾನಾಗೆ ವರ್ಗಾವಣೆ ಗೊಂಡಿದ್ದ 52 ವರ್ಷದ ಪೊಲೀಸ್ ಆಫೀಸರ್ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟೆಸ್ಟ್ ಮಾಡಿಸಲಾಗಿದ್ದು, ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಮುಖ್ಯ ಕಾರ್ಯದರ್ಶಿ ಕೆಬಿಎಸ್ ಸಿದ್ದು ತಿಳಿಸಿದ್ದಾರೆ.
ಈ ಮೂಲಕ ಪಂಜಾಬ್ನಲ್ಲಿ ಸೋಂಕಿತರ ಸಂಖ್ಯೆ 171ಕ್ಕೆ ಏರಿಕೆಯಾಗಿದ್ದು, ಕೆಲವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಈಗಾಗಲೇ 9 ಸಾವಿರ ಗಡಿ ದಾಟಿದ್ದು, 900ಕ್ಕೂ ಹೆಚ್ಚು ಜನರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ.