ಕರ್ನಾಟಕ

karnataka

ETV Bharat / bharat

ದೇಶಾದ್ಯಂತ 4 ಕೋಟಿ ವಲಸೆ ಕಾರ್ಮಿಕರು.. ಇಲ್ಲಿಯವರೆಗೆ ಊರು ಸೇರಿರೋದು 75 ಲಕ್ಷ ಮಂದಿ ಅಷ್ಟೆ

ರಾಷ್ಟ್ರವ್ಯಾಪಿ ಲಾಕ್‌ಡೌನ್ ಪ್ರಾರಂಭವಾದ ನಂತರದಿಂದ ಶ್ರಮಿಕ್ ವಿಶೇಷ ರೈಲುಗಳಲ್ಲಿ 35 ಲಕ್ಷ ಜನರು ತಮ್ಮ ಊರು ಸೇರಿದ್ರೆ, 40 ಲಕ್ಷ ಜನರು ಬಸ್​ಗಳ ಮೂಲಕ ಪ್ರಯಾಣ ಮಾಡಿದ್ದಾರೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದ್ದಾರೆ.

By

Published : May 24, 2020, 1:50 PM IST

4 crore migrants in India
ದೇಶಾದ್ಯಂತ 4 ಕೋಟಿ ವಲಸೆ ಕಾರ್ಮಿಕರು

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಸುಮಾರು ನಾಲ್ಕು ಕೋಟಿ ವಲಸಿಗರು ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್‌ಡೌನ್ ಘೋಷಣೆಯ ನಂತರ ಈವರೆಗೆ 75 ಲಕ್ಷ ಜನರು ರೈಲು ಮತ್ತು ಬಸ್‌ಗಳ ಮೂಲಕ ತಮ್ಮ ಊರು ಸೇರಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.

ವಲಸೆ ಕಾರ್ಮಿಕರ ವಿಚಾರ ಕುರಿತು ಮಾತನಾಡಿರುವ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ, ದೇಶದ ವಿವಿಧ ಭಾಗಗಳಿಂದ ವಲಸೆ ಕಾರ್ಮಿಕರನ್ನು ತಮ್ಮ ಸ್ಥಳಗಳಿಗೆ ಸಾಗಿಸಲು ರೈಲ್ವೆ ಇಲಾಖೆ ಮೇ 1 ರಿಂದ 2,600 ಕ್ಕೂ ಹೆಚ್ಚು ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿದೆ ಎಂದಿದ್ದಾರೆ.

2011ರ ಜನಗಣತಿ ಪ್ರಕಾರ ದೇಶದಲ್ಲಿ ನಾಲ್ಕು ಕೋಟಿ ವಲಸಿಗರಿದ್ದಾರೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಪ್ರಾರಂಭವಾದ ನಂತರದಿಂದ ಶ್ರಮಿಕ್ ವಿಶೇಷ ರೈಲುಗಳಲ್ಲಿ 35 ಲಕ್ಷ ಜನರು ತಮ್ಮ ಊರು ಸೇರಿದ್ರೆ, 40 ಲಕ್ಷ ಜನರು ಬಸ್​ಗಳ ಮೂಲಕ ಪ್ರಯಾಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ವಲಸೆ ಕಾರ್ಮಿಕರ ಸಮಸ್ಯೆಗಳ ಮೇಲ್ವಿಚಾರಣೆಗೆ ಗೃಹ ಸಚಿವಾಲಯವು 24x7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details