ಖರಗ್ಪುರ(ಪಶ್ಚಿಮ ಬಂಗಾಳ): ರಾಜ್ಯದ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ಐಐಟಿ - ಖರಗ್ಪುರ ಆವರಣದಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 28 ಅಂಗಡಿಗಳು ಸುಟ್ಟು ಭಸ್ಮವಾಗಿದೆ.
ಖರಗ್ಪುರ್ನಲ್ಲಿ ಅಗ್ನಿಗೆ ಆಹುತಿಯಾದ 28 ಅಂಗಡಿಗಳು
ಪಶ್ಚಿಮ ಬಂಗಾಳದ ಖರಗ್ಪುರ್ನಲ್ಲಿ ನಿನ್ನೆ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಬರೋಬ್ಬರಿ 28 ಅಂಗಡಿಗಳು ಸುಟ್ಟು ಭಸ್ಮವಾಗಿದೆ.
ಖರಗ್ಪುರ್ ಕ್ಯಾಂಪಸ್ನ ಟೆಕ್ ಮಾರ್ಕೆಟ್ನಲ್ಲಿ ಶುಕ್ರವಾರ ರಾತ್ರಿ 7.50ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ಅವಘಡದಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಎಲ್ಲ ಕಚೇರಿಗಳಿಗೂ ಬೀಗ ಹಾಕಿದ ಕಾರಣ, ಬೆಂಕಿ ಆವರಿಸಿದ ಸಮಯದಲ್ಲಿ ಯಾವೊಬ್ಬ ಸಿಬ್ಬಂದಿಗೂ ಅಪಾಯವಾಗಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅವಘಡ ಸಂಬವಿಸರಬಹುದೆಂಬ ಅನುಮಾನವಿದೆ, ಆದರೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.