ನವದೆಹಲಿ: ಸಮಾಜವಾದಿ ನಾಯಕ ಆಜಂ ಖಾನ್ ಮೇಲೆ ಸಾಲು ಸಾಲು ಎಫ್ಐಆರ್ ದಾಖಲಾಗುತ್ತಿದ್ದು ಸದ್ಯ ಈ ಸಂಖ್ಯೆ 26ಕ್ಕೆ ಏರಿಕೆಯಾಗಿದೆ!
ಭೂ ಅತಿಕ್ರಮಣದಲ್ಲಿ ಆಜಂ ಖಾನ್ ಹೆಸರು ತಳುಕು ಹಾಕಿಕೊಂಡಿದ್ದು, ಈ ಎಸ್ಪಿ ಮುಖಂಡನ ವಿರುದ್ಧ 26 ಪ್ರಕರಣ ದಾಖಲಾಗಿದೆ. ಇದಲ್ಲದೆ ಖಾನ್ ಹೆಸರು ಉತ್ತರ ಪ್ರದೇಶ ಸರ್ಕಾರದ ಲ್ಯಾಂಡ್ ಮಾಫಿಯಾ ಲಿಸ್ಟ್ನಲ್ಲೂ ಸೇರಿಕೊಂಡಿದೆ.
ಕೇಸ್ ಹಾಕಿದ್ದು ಏಕೆ?
ರೈತರ ಭೂಮಿಯನ್ನು ಬೆದರಿಕೆಯ ಮೂಲಕ ಪಡೆಯುವ ಹುನ್ನಾರವನ್ನು ಆಜಂ ಖಾನ್ ಮಾಡಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸದ್ಯ ಪ್ರಕರಣ ಅತ್ಯಂತ ಗಂಭೀರವಾಗಿರುವ ಕಾರಣ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಂಪುರ ಎಸ್ಪಿ ಅಜಯ್ ಪಾಲ್ ಶರ್ಮಾ ಮಾಹಿತಿ ನೀಡಿದ್ದಾರೆ.
2019ರ ಲೋಕಸಭಾ ಚುನಾವಣೆ ವೇಳೆ ತಮ್ಮ ಪ್ರತಿಸ್ಪರ್ಧಿ ಜಯಪ್ರದಾ ವಿರುದ್ಧ ಕೀಳುಮಟ್ಟದ ಪದ ಪ್ರಯೋಗಿಸಿ ಆಜಂ ಖಾನ್ ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಅವರಿಗೆ ಪ್ರಚಾರದಿಂದ ತಾತ್ಕಾಲಿಕ ನಿಷೇಧ ಹೇರಿತ್ತು.