ನವದೆಹಲಿ:ಕಳೆದ 24 ಗಂಟೆಗಳಲ್ಲಿ 23,950 ಹೊಸ ಕೊರೊನಾ ಸೋಂಕಿತರು ಪತ್ತೆಯಾಗುವ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,00,99,066 ಕ್ಕೆ ಏರಿಕೆಯಾಗಿದೆ.
ನಿನ್ನೆ 333 ಮಂದಿ ಕೋವಿಡ್ನಿಂದ ಕೊನೆಯುಸಿರೆಳೆದಿದ್ದು, ಈವರೆಗೆ ಒಟ್ಟು 1,46,444 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 26,895 ಮಂದಿ ಗುಣಮುಖರಾಗಿದ್ದಾರೆ.