ಕರ್ನಾಟಕ

karnataka

ETV Bharat / bharat

ಕ್ವಾರಂಟೈನ್ ಅವಧಿಯ ಕೊನೆಯ ದಿನ 10 ತಿಂಗಳ ಮಗು ಸಾವು

ಮಗು ನಿದ್ದೆ ಮಾಡದೆ ನರಳಾಡುತ್ತಿತ್ತು ಹಾಗೂ ದಡಾರದಂತಹ ಲಕ್ಷಣಗಳು ಕಂಡುಬಂದಿದ್ದರಿಂದ ಗುರುವಾರ ಬೆಳಗ್ಗೆ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಾಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದೆ.

10-month-old baby dies at quarantine centre in UP
10 ತಿಂಗಳ ಮಗು ಸಾವು

By

Published : Apr 11, 2020, 8:59 AM IST

ಗೋರಕ್​ಪುರ್​​: ಕ್ವಾರಾಂಟೈನ್​ನಲ್ಲಿದ್ದ 10 ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸಿದ್ದಾರ್ಥನಗರ ಜಿಲ್ಲೆಯ ಉಸ್ಕಾ ಬಜಾರ್​ನಲ್ಲಿ ನಡೆದಿದೆ.

ಕೊರೊನಾ ಶಂಕೆಯಿಂದ ಉಸ್ಕಾ ಬಜಾರ್​ನ ಪ್ರಾಥಮಿಕ ಶಾಲೆಯಲ್ಲಿ ಏರ್ಪಾಡು ಮಾಡಿದ್ದ ಕ್ವಾರಂಟೈನ್​ನಲ್ಲಿ ಮಗು ಮೃಪಟ್ಟಿದೆ. ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಆ್ಯಂಬುಲೆನ್ಸ್​ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರಾದರೂ ವೈದ್ಯರು ಮಗು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಮಗುವಿನ ಕುಟುಂಬದವರು ಮುಂಬೈನಿಂದ ಬಂದಿದ್ದರಿಂದ ಚೌರಾಸಿ ನಲ್ಲಿರಲು ತಿಳಿಸಲಾಗಿತ್ತು ಎಂದು ಸಿದ್ದಾರ್ಥನಗರ ಡಿಎಂ ದೀಪಕ್​ ಮೀನಾ ತಿಳಿಸಿದ್ದಾರೆ.

"ಮಗು ನಿದ್ದೆ ಮಾಡದೆ ನರಳಾಡುತ್ತಿತ್ತು ಹಾಗೂ ದಡಾರದಂತಹ ಲಕ್ಷಣಗಳು ಕಂಡುಬಂದಿದ್ದರಿಂದ ಗುರುವಾರ ಬೆಳಗ್ಗೆ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಾಲಾಯಿತಾದರೂ ವೈದ್ಯರು ಮಗು ಮೃತಪಟ್ಟಡಿದೆ ಎಂದು ಘೋಷಿಸಿದರು ಎಂದು ಮಗುವಿನ ತಂದೆ ನನಗೆ ತಿಳಿಸಿದ್ದಾರೆ" ಎಂದು ದೀಪಕ್​ ಮೀನಾ​ ಮಾಧ್ಯಮಕ್ಕೆ ಹೇಳಿದರು.

"ಆ ಕುಟುಂಬ ಕ್ವಾರಂಟೈನ್​ನಲ್ಲಿ​ 13 ದಿನ ಕಳೆದಿದ್ದರು. ಶುಕ್ರವಾರ ಅವರ ಕೊನೆ ಕ್ವಾರಂಟೈನ್​ ದಿನವಾಗಿತ್ತು. ಆ ಕುಟುಂಬಲ್ಲಿ ಯಾರಿಗೂ ಕೊರೊನಾ ಲಕ್ಷಣಗಳು ಕಂಡುಬಂದಿರಲಿಲ್ಲ. ಮಗುವಿನ ಅಂತ್ಯ ಸಂಸ್ಕಾರವನ್ನು ಅವರ ಗ್ರಾಮದಲ್ಲಿ ನಡೆಸಿದ್ದಾರೆ. ನಾನು ಆ ಹಳ್ಳಿಗೆ ಭೇಟಿ ನೀಡಿ ಕುಟುಂಬದವರನ್ನು ಮಾತನಾಡಿಸಿದ್ದೇನೆ" ಎಂದು ಮೀನಾ ತಿಳಿಸಿದ್ದಾರೆ.

ಮಗುವಿನ ಪೋಷಕರು ಮಾರ್ಚ್​ 29ರಂದು ಮುಂಬೈ ನಿಂದ ಬಂದು ಕ್ವಾರಂಟೈನ್​ಗೆ ಒಳಗಾಗಿದ್ದರು.

ABOUT THE AUTHOR

...view details