ಸಾವಾಯಿ ಮಾಧೋಪುರ್(ರಾಜಸ್ಥಾನ): ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆ 97ನೇ ದಿನಕ್ಕೆ ಕಾಲಿಟ್ಟಿದೆ. ರಾಜಸ್ಥಾನದ ಸವಾಯಿ ಮಾಧೋಪುರದ ಜಿನಾಪುರದಿಂದ ಇಂದಿನ ನಡಿಗೆಯನ್ನು ರಾಹುಲ್ ಗಾಂಧಿ ಆರಂಭಿಸಿದರು. ಅವರೊಂದಿಗೆ ಸಹೋದರಿ ಪ್ರಿಯಾಂಕ ಗಾಂಧಿ ಕೂಡ ಹೆಜ್ಜೆಹಾಕಿದರು. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇವರೊಂದಿಗೆ ಸೇರಿಕೊಂಡರು.
ಜೋಡೋ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಪುತ್ರಿ ಮಿರಾಯಾ ವಾದ್ರಾ ಕೂಡ ಕಾಣಿಸಿಕೊಂಡರು. ನಡಿಗೆಯ ನಡುವೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ಬಹಳ ಹೊತ್ತಿನ ಸಂವಾದ ನಡೆಯಿತು. ಯಾತ್ರೆಯಲ್ಲಿ ಹಲವು ಕಾಂಗ್ರೆಸ್ ಶಾಸಕರು ರಾಹುಲ್ ಜೊತೆ ಹೆಜ್ಜೆ ಹಾಕಿದ್ದು, ಕಂಡು ಬಂತು.