ಕರ್ನಾಟಕ

karnataka

ETV Bharat / bharat

ವಡೋದರಾ ಬೆಸ್ಟ್ ಬೇಕರಿ ಪ್ರಕರಣ: ಇಬ್ಬರು ಆರೋಪಿಗಳು ಖುಲಾಸೆ

ಗುಜರಾತ್​ನ ಬೆಸ್ಟ್ ಬೇಕರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮುಂಬೈನ ಸೆಷನ್​ ಕೋರ್ಟ್​ ದೋಷಮುಕ್ತಗೊಳಿಸಿದೆ.

By

Published : Jun 13, 2023, 3:09 PM IST

MH Best Bakery case Manilal Gohil Harshad Raoji Bhai Solanki Both the accused acquitted by Mumbai Sessions Court
ವಡೋದರಾದ ಬೆಸ್ಟ್ ಬೇಕರಿ ಪ್ರಕರಣ ಇಬ್ಬರು ಆರೋಪಿಗಳ ಕೇಸ್​ ಖುಲಾಸೆ ಮಾಡಿದ ಕೋರ್ಟ್​

ಮುಂಬೈ: 14 ಜನರನ್ನು ಹತ್ಯೆಗೈದ ವಡೋದರಾ ಬೆಸ್ಟ್ ಬೇಕರಿ ಪ್ರಕರಣದ ತೀರ್ಪು 21 ವರ್ಷಗಳ ನಂತರ ಹೊರಬಿದ್ದಿದೆ. ಮುಂಬೈನ ಸೆಷನ್ಸ್ ನ್ಯಾಯಾಲಯವು ಇಬ್ಬರು ಆರೋಪಿಗಳಾದ ಮಫತ್ ಗೋಹಿಲ್ ಮತ್ತು ಹರ್ಷದ್ ಸೋಲಂಕಿ ಎಂಬವರನ್ನು ಖುಲಾಸೆಗೊಳಿಸಿ ಇಂದು ಆದೇಶಿಸಿದೆ. ಈ ಇಬ್ಬರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ (ಐಪಿಸಿ)ಗಳ ಅಡಿಯಲ್ಲಿ ಕೊಲೆ, ಸಾಕ್ಷ್ಯ ನಾಶ ಮತ್ತು ಕೊಲೆ ಯತ್ನ ಆರೋಪ ಎದುರಿಸುತ್ತಿದ್ದರು. ಇನ್ನಿಬ್ಬರು ಆರೋಪಿಗಳಾದ ಜಯಂತಿ ಭಾಯ್ ಗೋಹಿಲ್ ಮತ್ತು ರಮೇಶ್ ಅಕಾ ರಿಂಕು ಗೋಹಿಲ್ ವಿಚಾರಣೆ ನಡೆಯುತ್ತಿರುವಾಗಲೇ ಜೈಲಿನಲ್ಲಿ ಸಾವನ್ನಪ್ಪಿದ್ದರು.

2019ರಲ್ಲಿ ಪ್ರಾರಂಭವಾದ ವಿಚಾರಣೆಯಲ್ಲಿ ಬೇಕರಿ ಕೆಲಸಗಾರ ಸೇರಿದಂತೆ ಹತ್ತು ಸಾಕ್ಷಿಗಳನ್ನು ಕೈಬಿಡಲಾಗಿತ್ತು. 2012ರಲ್ಲಿ ಬಾಂಬೆ ಹೈಕೋರ್ಟ್ ನಾಲ್ವರು ಆರೋಪಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಇತರ ಐವರನ್ನು ಖುಲಾಸೆಗೊಳಿಸಿತ್ತು. ಗಂಭೀರವಾಗಿ ಗಾಯಗಳೊಂದಿಗೆ ಬದುಕುಳಿದ ಬೇಕರಿಯ ನಾಲ್ವರು ಕಾರ್ಮಿಕರ ಸಾಕ್ಷ್ಯವನ್ನು ಕೋರ್ಟ್ ಪರಿಗಣಿಸಿತ್ತು. 2012ರಲ್ಲಿ ಹೈಕೋರ್ಟ್ ತನ್ನ ಆದೇಶದಲ್ಲಿ ಸಂಜಯ್ ಠಕ್ಕರ್, ದಿನೇಶ್ ರಾಜ್‌ಭರ್, ಜೀತು ಚೌಹಾನ್ ಮತ್ತು ಶಾನಾಭಾಯಿ ಬರಿಯಾ ಎಂಬವರನ್ನು ಈ ಹತ್ಯೆಗಳಲ್ಲಿ ತಪ್ಪಿತಸ್ಥರು ಎಂದು ಪರಿಗಣಿಸಿ ಘೋಷಿಸಿತ್ತು. ಜಹೀರಾ ಶೇಖ್ ಮತ್ತು ಈತನ ಕುಟುಂಬದ ಸಾಕ್ಷ್ಯವನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಜಹೀರಾ ಅವರ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಪ್ರಕರಣದ ಮರುವಿಚಾರಣೆಗೆ ಆದೇಶಿಸಿ ಮುಂಬೈ ಕೋರ್ಟ್‌ಗೆ ವರ್ಗಾಯಿಸಿತ್ತು.

2006ರಲ್ಲಿ ಮುಂಬೈನ ವಿಶೇಷ ನ್ಯಾಯಾಲಯವು 9 ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಆರೋಪಿಗಳು ಗುಜರಾತ್ ಗಲಭೆಯ ಸಮಯದಲ್ಲಿ ವಡೋದರದ ಹನುಮಾನ್ ಟೇಕ್ರಿ ಪ್ರದೇಶದಲ್ಲಿ ಬೆಸ್ಟ್ ಬೇಕರಿ ಹೊಂದಿದ್ದ ಜಹೀರಾ ಅವರ ತಂದೆ ದಿ. ಹಬೀಬುಲ್ಲಾ ಖಾನ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದ್ದರು.

ಘಟನೆಯ ವಿವರ :ಮಾರ್ಚ್ 1, 2002 ರಂದು ರಾತ್ರಿ 8.30 ರ ಸುಮಾರಿಗೆ ಗೋದ್ರಾ ಘಟನೆಯ ಎರಡು ದಿನಗಳ ನಂತರ ಸುಮಾರು 1,200 ಜನರ ಗುಂಪು ವಸತಿ ಕಟ್ಟಡ ಮತ್ತು ಬೇಕರಿಯ ಹೊರಗೆ ಜಮಾಯಿಸಿ ಬೆಂಕಿ ಹಚ್ಚಿದ್ದರು. ರಾತ್ರಿ ಹೊತ್ತಿನಲ್ಲಿ ನಡೆದ ಘಟನೆಯಲ್ಲಿ ಹಲವರು ಬೆಂಕಿಗೆ ಆಹುತಿಯಾಗಿದ್ದರು. ಕೆಲವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು.

ಈ ಪ್ರಕರಣವನ್ನು ಮೊದಲು ವಡೋದರಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಅಲ್ಲಿ ಎಲ್ಲ ಆರೋಪಿಗಳನ್ನು 2003ರಲ್ಲಿ ಖುಲಾಸೆಗೊಳಿಸಲಾಗಿತ್ತು. ಮುಖ್ಯ ಸಾಕ್ಷಿ ಜಹೀರಾ ಶೇಖ್ ಆರೋಪಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಏಪ್ರಿಲ್ 2004ರಲ್ಲಿ, ಸುಪ್ರೀಂ ಕೋರ್ಟ್ ಗುಜರಾತ್ ಹೊರಗೆ ಮರು ವಿಚಾರಣೆಗೆ ಆದೇಶಿಸಿತು.

ಹರ್ಷದ್‌ನನ್ನು 2010ರಲ್ಲಿ ರಾಜಸ್ಥಾನ ಪೊಲೀಸರು ಬಂಧಿಸಿದರೆ, ಮಾರ್ಚ್‌ 2013ರಲ್ಲಿ ಗುಜರಾತ್‌ನಲ್ಲಿ ಮಫತ್‌ನನ್ನು ಎನ್‌ಐಎ ಬಂಧಿಸಿತ್ತು. ಇನ್ನಿಬ್ಬರು ತಲೆಮರೆಸಿಕೊಂಡಿದ್ದರು. ನಂತರ ಅವರನ್ನೂ ಬಂಧಿಸಲಾಗಿತ್ತು. ಆದರೆ ಜೈಲಿನಲ್ಲಿ ಸಾವನ್ನಪ್ಪಿದರು. ಈಗ ಮಫತ್ ಗೋಹಿಲ್ ಮತ್ತು ಹರ್ಷದ್ ಸೋಲಂಕಿ ಎಂಬಿಬ್ಬರನ್ನು ಮುಂಬೈ ಕೋರ್ಟ್​ ಖುಲಾಸೆಗೊಳಿಸಿದೆ.

ಇದನ್ನೂ ಓದಿ:ಜಾರ್ಖಂಡ್​ನಲ್ಲಿ ಹೃದಯಾಘಾತಕ್ಕೆ ಯೋಧರಿಬ್ಬರ ಸಾವು; ಉತ್ತರಾಖಂಡದಲ್ಲಿ ಘರ್ಷಣೆ, ನಿಷೇಧಾಜ್ಞೆ ಜಾರಿ

ABOUT THE AUTHOR

...view details