ನವದೆಹಲಿ :ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಸಣ್ಣ ಪ್ರಮಾಣದ ಹೃದಯಾಘಾತವಾಗಿದೆ. ಆದರೆ, ಅದು ಗಂಭೀರವಲ್ಲ ಎಂದು ಐಪಿಎಲ್ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ವೈದ್ಯರು ಗಂಗೂಲಿ ಅವರ ಆರೋಗ್ಯದ ಮೇಲೆ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಜೊತೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಅತಿ ಶೀಘ್ರವೇ ಗುಣಮುಖರಾಗಿ ಎಂದು ಗಂಗೂಲಿ ಅವರಿಗೆ ಶುಕ್ಲಾ ಹಾರೈಸಿದ್ದಾರೆ.