ಕರ್ನಾಟಕ

karnataka

ETV Bharat / bharat

ಇನ್ಮುಂದೆ ಇಲ್ಲಿ 10 ವರ್ಷ ಹಳೆಯ ಡೀಸೆಲ್, 15 ವರ್ಷ ಹಳೆಯ ಪೆಟ್ರೋಲ್ ವಾಹನ ರಸ್ತೆಗೆ ಇಳಿಯುವಂತಿಲ್ಲ - ಹಳೆಯ ವಾಹನಗಳ ಓಡಾಟ ನಿಷೇಧ

ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಸ್ಕ್ರ್ಯಾಪ್ ನೀತಿಯ ಪ್ರಕಾರ, ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ಮಾಡಬೇಕಾಗುತ್ತದೆ. ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ವಾಹನ, ಅದಕ್ಕಾಗಿ ಮರು ನೋಂದಣಿ ಮಾಡಬೇಕಾಗುತ್ತದೆ. ಮರು-ನೋಂದಣಿ ಶುಲ್ಕವನ್ನು ಈಗಿರುವುದಕ್ಕಿಂತ 10 ಪಟ್ಟು ಹೆಚ್ಚು ಪಾವತಿಸಬೇಕಾಗುತ್ತದೆ. ದೆಹಲಿಯಲ್ಲಿ ಸುಮಾರು 36 ಲಕ್ಷ ವಾಹನಗಳು 20ವರ್ಷ ಹಳೆಯದ್ದಾಗಿವೆ. ಇನ್ನುಮುಂದೆ ಈ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ..

ಹಳೆಯ ವಾಹನಗಳ ಓಡಾಟ ನಿಷೇಧ
ಹಳೆಯ ವಾಹನಗಳ ಓಡಾಟ ನಿಷೇಧ

By

Published : Aug 24, 2021, 5:05 PM IST

ನವದೆಹಲಿ :ಮಾಲಿನ್ಯದ ಸಮಸ್ಯೆ ಮತ್ತು ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಹಳೆಯ ವಾಹನಗಳ ಕಾರ್ಯಾಚರಣೆಯ ಬಗ್ಗೆ ಪ್ರಮುಖ ನಿರ್ಧಾರ ಕೈಗೊಂಡಿದೆ.

ಈ ನಿರ್ಧಾರದ ಪ್ರಕಾರ, 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ದೆಹಲಿ-ಎನ್‌ಸಿಆರ್ ರಸ್ತೆಗಳಲ್ಲಿ ಓಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ, ದೆಹಲಿ ಸರ್ಕಾರವು ಸಾರ್ವಜನಿಕ ಜಾಹೀರಾತನ್ನು ಬಿಡುಗಡೆ ಮಾಡಿದೆ. ಹಳೆಯ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.

ಈ ಬಗ್ಗೆ ಸಾರ್ವಜನಿಕ ಜಾಹೀರಾತುಗಳನ್ನು ನೀಡಲಾಗಿದೆ. ಹಳೆಯ ವಾಹನಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ 7 ಏಪ್ರಿಲ್, 2015ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೂಡ 29 ಅಕ್ಟೋಬರ್, 2018ರಂದು ಆದೇಶ ನೀಡಿದೆ. ಈ ಎರಡು ಆದೇಶಗಳ ದೃಷ್ಟಿಯಿಂದ 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ಇನ್ನು ಮುಂದೆ ದೆಹಲಿಯಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ.

ಹಳೆಯ ವಾಹನಗಳ ಓಡಾಟ ನಿಷೇಧ

ದೆಹಲಿ ಸರ್ಕಾರದ ಹೊಸ ಆದೇಶದ ಪ್ರಕಾರ, ಎಲ್ಲಾ ವರ್ಗದ ವಾಹನಗಳಿಗೆ ನೋಂದಣಿ ಪ್ರಮಾಣ ಪತ್ರದ ಅವಧಿಯನ್ನು 15 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಹೊಸ ಆದೇಶದ ಪ್ರಕಾರ,10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳನ್ನು ಇನ್ನು ಮುಂದೆ ರಸ್ತೆಗಳಲ್ಲಿ ಓಡಿಸಲು ಅನುಮತಿಸಲಾಗುವುದಿಲ್ಲ.

ಈ ನಿರ್ದೇಶನವನ್ನು ಉಲ್ಲಂಘಿಸಿದ್ದಕ್ಕಾಗಿ ವಾಹನಗಳನ್ನು ಜಪ್ತಿ ಮಾಡಬಹುದು ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ಹೇಳಿದೆ ಎಂದು ವಿವರಿಸಿದೆ. ಈ ಆದೇಶವನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿದ ಸ್ಕ್ರ್ಯಾಪ್ ಪಾಲಿಸಿಗೆ ಲಿಂಕ್ ಮಾಡಲಾಗಿದೆ. ಇದರಲ್ಲಿ ಹಳೆಯ ವಾಹನಗಳನ್ನು ರಸ್ತೆಗಳಿಂದ ತೆಗೆಯಬೇಕು. ಇದರಲ್ಲಿ 10 ವರ್ಷ ಹಳೆಯ ಡೀಸೆಲ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ಸೇರಿವೆ.

ಈ ನೀತಿಯ ಅಡಿಯಲ್ಲಿ ಖಾಸಗಿ ವಾಹನವು 20 ವರ್ಷಗಳ ನಂತರ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆಗೆ ಮತ್ತು 15 ವರ್ಷಗಳ ನಂತರ ವಾಣಿಜ್ಯ ವಾಹನ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ವಾಹನಗಳನ್ನು ಚಲಾಯಿಸಿದರೆ ಭಾರೀ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ.

ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಾಹನಗಳನ್ನು ಓಡಿಸಲು ಅನುಮತಿಸಲಾಗುತ್ತದೆ. ಸ್ಕ್ರ್ಯಾಪ್ ಪಾಲಿಸಿ ಅಡಿಯಲ್ಲಿ ಅನರ್ಹ ವಾಹನಗಳನ್ನು ಸ್ಕ್ರ್ಯಾಪ್‌ನಲ್ಲಿ ಕಳುಹಿಸಲಾಗುತ್ತದೆ. ಈಗ ವಾಹನದ ಮಾಲೀಕರು 10 ವರ್ಷಗಳ ಹಳೆಯ ಡೀಸೆಲ್ ವಾಹನಗಳು ಮತ್ತು 15ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ದೆಹಲಿಯ ರಸ್ತೆಗಳಲ್ಲಿ ಓಡಿಸಬಾರದು ಎಂದು ಆದೇಶಿಸಲಾಗಿದೆ. ಈ ವರ್ಗದ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸೂಚಿಸಲಾಗಿದೆ. ಇದಕ್ಕಾಗಿ, ಸಾರಿಗೆ ಇಲಾಖೆಯು ಅಧಿಕೃತ ಸ್ಕ್ರ್ಯಾಪಿಂಗ್ ಏಜೆನ್ಸಿಗಳ ಪಟ್ಟಿ ಸಿದ್ಧಪಡಿಸಿದೆ. ಅಲ್ಲಿ ಕಾರುಗಳನ್ನು ಸ್ಕ್ರ್ಯಾಪ್ ಮಾಡಬಹುದು.

ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ಸ್ಕ್ರಾಪರ್‌ಗಳ ಪಟ್ಟಿ ನೀಡಿದೆ. ಅಲ್ಲಿ ವಿವರ ಪಟ್ಟಿಯನ್ನು ನೋಡಬಹುದು. ಈ ಆದೇಶವನ್ನು ಅನುಸರಿಸದ ವಾಹನ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ.

ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಸ್ಕ್ರ್ಯಾಪ್ ನೀತಿಯ ಪ್ರಕಾರ, ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ಮಾಡಬೇಕಾಗುತ್ತದೆ. ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ವಾಹನ, ಅದಕ್ಕಾಗಿ ಮರು ನೋಂದಣಿ ಮಾಡಬೇಕಾಗುತ್ತದೆ. ಮರು-ನೋಂದಣಿ ಶುಲ್ಕವನ್ನು ಈಗಿರುವುದಕ್ಕಿಂತ 10 ಪಟ್ಟು ಹೆಚ್ಚು ಪಾವತಿಸಬೇಕಾಗುತ್ತದೆ. ದೆಹಲಿಯಲ್ಲಿ ಸುಮಾರು 36 ಲಕ್ಷ ವಾಹನಗಳು 20ವರ್ಷ ಹಳೆಯದ್ದಾಗಿವೆ. ಇನ್ನುಮುಂದೆ ಈ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ.

ಓದಿ: ಸ್ಕ್ರ್ಯಾಪ್ ಪಾಲಿಸಿ.. ವಾಹನ ಮಾರಾಟ ಕ್ಷೇತ್ರದಲ್ಲಿ ಸುಧಾರಣೆಯ ಮುನ್ಸೂಚನೆ..

For All Latest Updates

ABOUT THE AUTHOR

...view details